Friday, 3rd February 2023

ಕತ್ರಾದಲ್ಲಿ ಎರಡು ಸಲ ಭೂಕಂಪ

ಮ್ಮುಕಾಶ್ಮೀರ: ಕತ್ರಾದಲ್ಲಿ 1 ಗಂಟೆಯಲ್ಲಿ ಎರಡು ಸಲ ಭೂಕಂಪ ಸಂಭ ವಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ಮತ್ತು 4.1 ತೀವ್ರತೆಯ ರಷ್ಟು ದಾಖಲಾಗಿದೆ.

ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಅಕ್ಷಾಂಶ 33.20 ಡಿಗ್ರಿ ಉತ್ತರ ಮತ್ತು ರೇಖಾಂಶ 75.56 ಡಿಗ್ರಿ ಪೂರ್ವದಲ್ಲಿ 5 ಕಿ.ಮೀ ಆಳದಲ್ಲಿ ಭೂ ಕಂಪ ಸಂಭವಿಸಿದೆ.

ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಇಂದು ರಾತ್ರಿ 11:04 ರ ಸುಮಾರಿಗೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 5 ಕಿ.ಮೀ ಕೆಳಗಿತ್ತು’ ಎಂದು ಟ್ವೀಟ್ ಮಾಡಿದೆ.

error: Content is protected !!