Friday, 24th March 2023

ಚಿಂತಾಮಣಿ ತಾಲೂಕಿನ ಆಸುಪಾಸು ಕಂಪಿಸಿದ ಭೂಮಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ, ನಂದನವನ, ಅಪ್ಸನ ಹಳ್ಳಿ, ಗೋನೇನಹಳ್ಳಿ ಗ್ರಾಮಗಳ ಸುತ್ತಮುತ್ತ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಜನರು ಮನೆಯಿಂದ ಹೊರಗೆ ಬಂದಿದ್ದಾರೆ.

ದೊಡ್ಡ ಶಬ್ಧವೊಂದು ಕೇಳಿಸಿದ್ದು ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದೆ. ಭೂಮಿ ಕಂಪಿಸಿದ ಅನುಭವವಾದ ತಕ್ಷಣ ಜನರು ಭೀತಿಗೊಂಡು ಹೊರಗೆ ಬಂದಿದ್ದಾರೆ. ಮಂಗಳ ವಾರ ರಾತ್ರಿ 10 ಗಂಟೆ ಸುಮಾರಿಗೆ ಒಂದು ಭಾರೀ ಭೂಮಿ ಕಂಪಿಸಿದ್ದು, ಇದರಿಂದ ಗ್ರಾಮಸ್ಥರು ಭೀತಿಯಿಂದಲೇ ಇದ್ದರು.

ಬುಧವಾರ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಭಯಗೊಂಡ ಗ್ರಾಮಸ್ಥರು ಮನೆಯಿಂದ ಹೊರ ಬಂದಿದ್ದಾರೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವು ಗ್ರಾಮಗಳಲ್ಲಿ ರಾತ್ರಿ ಜನರು ಮನೆಯ ಹೊರಗೆ ಕಾಲ ಕಳೆದಿದ್ದಾರೆ.

ಜಿಲ್ಲೆಯಲ್ಲಿ 2018ರಲ್ಲಿ ಒಂದು ಭಾರೀ ಭೂಕಂಪದ ಅನುಭವವಾಗಿದ್ದು ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದಿದ್ದವು. ಗ್ರಾಮಸ್ಥರು ಮನೆಯಿಂದ ಹೊರಗೆ ಬಂದಿದ್ದರು.

ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ 1.2 ತೀವ್ರತೆಯ ಭೂಕಂಪ ವಾಗಿರುವುದನ್ನು ಸ್ಪಷ್ಟಪಡಿಸಿದ್ದರು. 

error: Content is protected !!