Monday, 16th May 2022

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಭೂಕಂಪ: 4.3ರಷ್ಟು ತೀವ್ರತೆ

ಚೆನ್ನೈ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ.

ಪೋರ್ಟ್‌ಬ್ಲೇರ್‌ನ ಆಗ್ನೇಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕಂಪನಗಳು 100 ಕಿಲೋಮೀಟರ್ ಆಳವನ್ನು ಹೊಂದಿದ್ದು, ಬೆಳಿಗ್ಗೆ 5.31 ರ ಸುಮಾರಿಗೆ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.

ದ್ವೀಪದಲ್ಲಿ 93.34ರಷ್ಟು ಉದ್ದ ಹಾಗೂ 100 ಕಿಲೋ ಮೀಟರ್ ಆಳದವರೆಗೆ ಭೂಮಿ ಕಂಪಿಸಿದೆ. SSE ಆಫ್ ಪೋರ್ಟ್‌ಬ್ಲೇರ್ 165 ಕಿಲೋ ಮೀಟರ್ ದೂರದಲ್ಲಿ ಭೂಮಿ ಕಂಪಿಸಿರುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.