Monday, 16th May 2022

ಆಯೋಧ್ಯೆ ಸಮೀಪ ಭೂಕಂಪ: 4.3 ರಷ್ಟು ತೀವ್ರತೆ

ಅಯೋಧ್ಯೆ: ಉತ್ತರ ಪ್ರದೇಶ ರಾಜ್ಯದ ಆಯೋಧ್ಯೆ ಸಮೀಪ ಭೂಕಂಪ ಸಂಭವಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಶುಕ್ರವಾರ ತಿಳಿಸಿದೆ.

ಅಯೋಧ್ಯೆ ನಗರದಿಂದ 176 ಕಿ.ಮೀ ದೂರದಲ್ಲಿ ಸಂಭವಿಸಿದ ಭೂಕಂಪನದಿಂದ ಜನರು ಭಯಭೀತಗೊಂಡಿದ್ದಾರೆ.

ಭೂಕಂಪನ 15 ಕಿಲೋಮೀಟರ್ ಆಳದಲ್ಲಿ ಕೇಂದ್ರೀಕೃತವಾಗಿದೆ ಎಂದು ಹೇಳಿದ್ದಾರೆ. ಗಾಢ ನಿದ್ರೆಯಲ್ಲಿದ್ದ ಜನರಿಗೆ ಭೂಕಂಪನ ತೀವ್ರ ಕಳವಳ ಸೃಷ್ಟಿಸಿದೆ.