Friday, 2nd December 2022

ಚಿಕ್ಕಬಳ್ಳಾಪುರ: ವಿವಿಧೆಡೆ ಭೂಕಂಪನ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂಕಂಪನದಿಂದ ಅಲ್ಲಿನ ಜನರು ಭಯಭೀತಿ ಗೊಂಡಿದ್ದು ಮನೆಯ ಹೊರಗಡೆ ಬಂದಿದ್ದಾರೆ.

ತಾಲೂಕಿನ ಶೆಟ್ಟಿಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿ ಕಂಪಿಸುವ ರೀತಿಯಲ್ಲಿ ಅಲ್ಲಿನ ಜನರಿಗೆ ಅನುಭವ ಉಂಟಾಗಿದೆ.

ಕಳೆದ ಡಿಸೆಂಬರಿನಲ್ಲಿ ಮೂರು ಬಾರಿ ಭೂಕಂಪನ ಉಂಟಾಗಿತ್ತು. ಕೆಲವು ಮನೆಗಳು ಬಿದ್ದು ಹೋಗಿದ್ದವು, ಗೋಡೆಗಳು ಕುಸಿದು ಬಿದ್ದವು. ಅದೇ ರೀತಿ ಬೆಳಗ್ಗೆ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ 2.6 ರಷ್ಟು ಇದ್ದು, ಸುಮಾರು 7 ರಿಂದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಭೂಕಂಪನ ಸಂಭವಿ ಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು. ಭೂಕಂಪನ ಯಾವುದೇ ರೀತಿಯಲ್ಲಿ ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ.