Tuesday, 17th May 2022

ಜಮ್ಮು ಕಾಶ್ಮೀರದಲ್ಲಿ 4.3 ತೀವ್ರತೆ ಭೂಕಂಪ

ಜಮ್ಮುಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಇಂದು ಬೆಳಿಗ್ಗೆ 9.21 ಕ್ಕೆ ಕಂಪನದ ಅನುಭವವಾಗಿದೆ. ರಾಜ್ಯದ ಹೆನ್ಲೆ ಗ್ರಾಮದಿಂದ ಪೂರ್ವಕ್ಕೆ 513 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಇನ್ನೂ ಯಾವುದೇ ಜೀವ ಹಾನಿ ಅಥವಾ ಆಸ್ತಿ-ಹಾನಿ ವರದಿಯಾಗಿಲ್ಲ.

ಕಳೆದ ಶನಿವಾರ ರಾತ್ರಿ ರಾಜ್ಯದಲ್ಲಿ ಕಂಪನದ ಅನುಭವವಾಗಿತ್ತು. ಲೇಹ್ ನ ಅಲ್ಚಿ ಪ್ರದೇಶದಲ್ಲಿ ಕಂಪನಗಳು ಅಪ್ಪಳಿಸಿದವು. ಅಲ್ಚಿ (ಲೇಹ್) ನ ಜಮ್ಮು ಮತ್ತು ಕಾಶ್ಮೀರದ ಬಳಿ ಶನಿವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಕಂಪನ ಅನುಭವ ವಾಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.