Tuesday, 17th May 2022

ಮಿಜೋರಾಂನ ಥೇನ್ಮಾಲ್‍ನಲ್ಲಿ 6.1 ತೀವ್ರತೆ ಭೂಕಂಪನ

ಮಿಜೋರಾಂ: ಈಶಾನ್ಯ ರಾಜ್ಯದ ಮಿಜೋರಾಂನ ಥೇನ್ಮಾಲ್‍ನಲ್ಲಿ ಶುಕ್ರ ವಾರ ಭೂಕಂಪನ ಸಂಭವಿಸಿದೆ.

ಇದರಿಂದಾಗಿ, ಪಶ್ಚಿಮ ಬಂಗಾಳ ಹಾಗೂ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲೂ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂ ಕಂಪನ ದಾಖಲಾಗಿದ್ದು, ಥೇನ್ಮಾಲ್‍ನಿಂದ 73 ಕಿ.ಮೀ. ದೂರದ ಪ್ರದೇಶದಲ್ಲಿ 93 ಅಡಿ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಜನವಸತಿ ಪ್ರದೇಶಗಳು ಈ ಭಾಗ ದಲ್ಲಿ ಇಲ್ಲದಿದ್ದುದ್ದರಿಂದ ಜೀವಹಾನಿಗಳು ಸಂಭವಿ ಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶ ದಲ್ಲಿ ಜನರು ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.