Sunday, 27th November 2022

ವಿಜಯಪುರದಲ್ಲಿ ಮತ್ತೆ ಭೂಕಂಪನ

ವಿಜಯಪುರ: ವಿಜಯಪುರದಲ್ಲಿ ಮತ್ತೆ ಗುರುವಾರ ತಡರಾತ್ರಿ ಮತ್ತೊಂದು ಭೂಕಂಪ ವರದಿಯಾಗಿದೆ.

ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಕವಲಗಿ ಗ್ರಾಮದಲ್ಲಿ 10 ಕಿ.ಮೀ ಆಳದಲ್ಲಿದೆ. ಇದು ಕಳೆದ 1 ವಾರದಲ್ಲಿ ವರದಿಯಾದ 10 ನೇ ಭೂಕಂಪವಾಗಿದೆ. ಜಿಲ್ಲೆಯಲ್ಲಿ ಸತತ ಒಂದು ವಾರದಿಂದ ಭೂಮಿ ಕಂಪಿಸುತ್ತಲೇ ಇದೆ.

ಕಳೆದ ಸೋಮವಾರ ಸಾಯಂಕಾಲ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿತ್ತು. ನಗರದ ರೈಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮಟ ಏರಿಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ‌ ಭೂಮಿಯಲ್ಲಿ ಸದ್ದು ಕೇಳಿಬಂದಿತ್ತು.

ಕವಲಗಿ ಗ್ರಾಮದಲ್ಲಿ ವರದಿಯಾಗಿರುವಂತೆಯೇ ಭೂಮಿಯ 10 ಕೀಮೀ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡ ಳಿತ ವರದಿ ಮಾಡಿತ್ತು. ಸೋಮವಾರ ರಾತ್ರಿ ಕೆಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿರುವ ವರದಿ ಬಂದಿದೆ.

ವಿಜಯಪುರ ನಗರ, ಸಿಂದಗಿ, ಇಂಡಿ, ಬಸವನಬಾಗೇವಾಡಿ, ನೆರೆಯ ಬಾಗಲಕೋಟೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ.

ಕಳೆದ ವಾರ ವಿಜಯಪುರ ‌ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕುಗಳು ಸೇರಿದಂತೆ ಇತರೆ ಭಾಗಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈವರೆಗೆ 19ನೇ ಬಾರಿ ಭೂಕಂಪಿಸಿದೆ.