Sunday, 14th August 2022

ಪೂರ್ವ ಟಿಮೋರ್’ನಲ್ಲಿ 6.1 ತೀವ್ರತೆ ಭೂಕಂಪ

ನವದೆಹಲಿ: ಪೂರ್ವ ಟಿಮೋರ್ ಕರಾವಳಿಯಲ್ಲಿ ಶುಕ್ರವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಹಿಂದೂ ಮಹಾಸಾಗರ ದಲ್ಲಿ ಸುನಾಮಿ ಎಚ್ಚರಿಕೆ ಯನ್ನೂ ನೀಡಿದೆ.

ಟಿಮೋರ್ ದ್ವೀದಪ ಪೂರ್ವ ಆರಂಭದಿಂದ 51.4 ಕಿಲೋ ಮೀಟರ್ ಆಳದಲ್ಲಿ ಭೂ ಕಂಪ ಸಂಭವಿಸಿದೆ ಎಂದು ಅಮೆರಿಕ ಜಿಯಾಲಾಜಿಕಲ್ ಸರ್ವೆ ಹೇಳಿದೆ. ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ನಡುವೆ ಭೂಕಂಪನ ಕೇಂದ್ರ ಬಿಂದುವಾಗಿದ್ದು. ಹಿಂದೂ ಮಹಾಸಾಗರದಲ್ಲಿ ಸುನಾಮಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಪೂರ್ವ ಟಿಮೋರ್ ಮತ್ತು ಇಂಡೋನೇಷ್ಯಾ ಪೆಸಿಫಿಕ್ ಸಾಗರದ “ರಿಂಗ್ ಆಫ್ ಫೈರ್” ಪ್ರದೇಶದಲ್ಲಿ ಇವೆ, ರಿಂಗ್ ಆಫ್‌ ಫೈರ್ ಪ್ರದೇಶದಲ್ಲಿ ಜ್ವಾಲಾಮುಖಿಯಂತಹ ಘಟನೆ ಸಾಮಾನ್ಯವಾಗಿದೆ, ಭೂಕಂಪನ ಸಂಭವಿಸುತ್ತಲೇ ಇರುತ್ತದೆ. ಸುಮಾರು 450 ಜ್ವಾಲಾ ಮುಖಿಗಳು ಈ ಪ್ರದೇಶದಲ್ಲಿದೆ. ಪ್ರಪಂಚದಲ್ಲಿರುವ ಒಟ್ಟು ಜ್ವಾಲಾಮುಖಿಗಳ ಪೈಕಿ ಶೇ.75 ರಷ್ಟು ರಿಂಗ್ ಆಫ್‌ ಫೈರ್ ಪ್ರದೇಶದಲ್ಲಿವೆ.

ಪೂರ್ವ ಟಿಮೋರ್ 13 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಮತ್ತು ಆಗ್ನೇಯ ಏಷ್ಯಾದ ಚಿಕ್ಕ ದೇಶವಾಗಿದೆ.

ನೆರೆಯ ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ 6.2 ತೀವ್ರತೆಯ ಭೂಕಂಪವು 12 ಜನರ ಸಾವಿಗೆ ಕಾರಣವಾಗಿತ್ತು. 2004 ರಲ್ಲಿ ಸಂಭವಿಸಿದ 9.1-ತೀವ್ರತೆಯ ಭೂಕಂಪ ದಿಂದ ಸುಮಾತ್ರಾ ಕರಾವಳಿಯನ್ನು ಅಪ್ಪಳಿಸಿದ ಸುನಾಮಿ ಇಂಡೋನೇಷ್ಯಾದಲ್ಲಿ ಸುಮಾರು 1,70,000 ಸೇರಿದಂತೆ ಪ್ರದೇಶದಾದ್ಯಂತ 2,20,000 ಜನರನ್ನು ಬಲಿ ಪಡೆದಿತ್ತು.

2018ರಲ್ಲಿ ಲಾಂಬೋಕ್ ದ್ವೀಪದಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. ಅದರ ಬಳಿಕ ಹಲವು ವಾರಗಳ ಕಾಲ ನಿರಂತರ ಕಂಪನಗಳಾಗಿದ್ದವು. ಲಾಂಬೋಕ್ ದ್ವೀಪ ಮತ್ತು ನೆರೆಯ ಸುಂಬಾವಾದಲ್ಲಿ 550ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು.