Tuesday, 27th October 2020

ಮುಂದುವರಿದ ಇಡಿ ವಿಚಾರಣೆ

ಬೆಂಗಳೂರು: ಡ್ರಗ್‌ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟಿಯರಾದ ರಾಗಿಣಿ, ಸಂಜನಾರನ್ನು ಎರಡನೇ ದಿನವೂ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಶುಕ್ರವಾರದಿಂದ ವಿಚಾರಣೆ ಆರಂಭಗೊಂಡಿದ್ದು, ಅದು ಶನಿವಾರವೂ ಕೂಡ ಮುಂದುವರಿದಿದೆ.

ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಬ್ಯಾಾಂಕ್ ಅಕೌಂಟ್ ಹವಾಲಾ ಅಕ್ರಮ ಹಣಗಳಿಕೆ ವಿಚಾರವಾಗಿ ಪ್ರಶ್ನೆಗಳನ್ನು ನಟಿಯರ ಮುಂದಿಡಲಾಗಿದೆ. ಡ್ರಗ್‌ಸ್‌‌ನಲ್ಲಿ ಅಕ್ರಮ ಹಣಗಳಿಸಿದ್ದಾರೆಂದು ಶಂಕಿಸಿ ಪ್ರಶ್ನೆೆಗಳನ್ನು ಕೇಳಲಾಗಿದೆ. 5 ಜನ ಇಡಿ ಅಧಿಕಾರಿಗಳಿಂದ ಮಹಿಳಾ ಬ್ಯಾಾರಕ್‌ನಲ್ಲಿ ರಾಗಿಣಿ ಮತ್ತು ಸಂಜನಾರನ್ನು ಕರೆಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಹಿಳಾ ಬ್ಯಾಾರಕ್‌ನಲ್ಲಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಯಾರಿಗೂ ಪ್ರವೇಶವಿಲ್ಲದ್ದರಿಂದ ನಿಗದಿತ ಆಡಳಿತ ಕಚೇರಿಯಲ್ಲಿ ವ್ಯವಸ್ಥೆೆ ಮಾಡಲಾಗಿದೆ.

Leave a Reply

Your email address will not be published. Required fields are marked *