Sunday, 3rd July 2022

ಅಡುಗೆ ಎಣ್ಣೆ ಬೆಲೆ ಮತ್ತೆ ಇಳಿಮುಖ

ನವದೆಹಲಿ: ಅಡುಗೆ ಎಣ್ಣೆ ಬೆಲೆ ಮತ್ತೆ ಭಾರೀ ಇಳಿಮುಖದತ್ತ ಸಾಗಿದೆ. ಲೀಟರ್ ಎಣ್ಣೆ ದರ 10 ರೂಪಾಯಿಂದ 20 ರೂಪಾಯಿ ವರೆಗೆ ಇಳಿಕೆಯಾಗಲಿದೆ ಎನ್ನಲಾಗಿದೆ.

ಅಡುಗೆ ಎಣ್ಣೆ ತಯಾರಿಕೆ ಬೇಕಾಗುವ ಕಚ್ಚಾ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಆಮದು ಸುಂಕ ಹೇರಿದ್ದ ಪರಿಣಾಮ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಗಿತ್ತು. ಲೀಟರ್‌ಗೆ 100 ರೂ. ಇದ್ದ ಎಣ್ಣೆ ದರ ಏಕಾಏಕಿ ಇನ್ನೂರು ರೂಪಾಯಿಯ ಗಡಿ ದಾಟಿತ್ತು. ಇದೀಗ ಕೇಂದ್ರ ಸರ್ಕಾರ ಖಾದ್ಯ ತೈಲ ಎಣ್ಣೆ ಮೇಲಿನ ಸುಂಕ ಇಳಿಕೆ ಮಾಡಿದೆ. ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ತೀರ್ಮಾನ ಮಾಡಿವೆ. ಹೀಗಾಗಿ ಸೂರ್ಯಕಾಂತಿ ಅಡುಗೆ ಎಣ್ಣೆ ಸೇರಿ ಖಾದ್ಯ ತೈಲಗಳ ಲೀಟರ್‌ಗೆ ದರ 10 ರಿಂದ 20 ರೂ. ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ.

ಅದಾನಿ ವಿಲ್ಮರ್‌, ಪತಂಜಲಿ, ಮದರ್ ಡೈರಿ ಹಾಗೂ ಇಮಾಮಿ ಆಗ್ರೋಟೆಕ್‌ ಮುಂತಾದ ಪ್ರಮುಖ ಕಂಪನಿಗಗಳು ಸಾಸಿವೆ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಸಸ್ಯಜನ್ಯ ಎಣ್ಣೆಗಳ ದರ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿವೆ.

ಫಾರ್ಚೂರ್‌ ಬ್ರಾಂಡ್‌ನ ಸಂಸ್ಕರಿತ ಸೂರ್ಯಕಾಂತಿ ಎಣ್ಣೆಯ ದರ ಲೀಟರ್‌ 220 ಇತ್ತು. ಫಾರ್ಚೂನ್ ಸೋಯಾಬೀನ್‌ ಹಾಗೂ ಸಾಸಿವೆ ಎಣ್ಣೆಯ ದರ ಕೂಡ ಲೀಟರ್‌ಗೆ 10 ರೂ. ನಷ್ಟು ಇಳಿಕೆ ಮಾಡಲಾಗಿದೆ.

ಬಾಬಾ ರಾಮ್‌ದೇವ್‌ ಒಡೆತನದ ಪತಂಜಲಿ ಖಾದ್ಯ ತೈಲದ ಬೆಲೆ ಶೇ.7 ರಿಂದ ಶೇ. 10ರಷ್ಟು ಇಳಿಕೆ ಮಾಡಿದೆ. ಮದರ್‌ ಡೈರಿ ಕೂಡ ಎಲ್ಲಾ ರೀತಿಯ ಖಾದ್ಯ ತೈಲದ ಬೆಲೆಗಳನ್ನು ಲೀಟರ್‌ಗೆ 15 ರೂ. ಗಳಷ್ಟು ಇಳಿಕೆ ಮಾಡಿದೆ.