ಮಾನ್ವಿ: ಪ್ರತಿಯೊಬ್ಬ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಉನ್ನತವಾದ ಸಾಧನೆಯ ಆಶಯಗಳಿಗಾಗಿ, ಗುರಿಯನ್ನು ಹೊಂದಲು ನಿರಂತರವಾದ ಪರಿಶ್ರಮ ಪಡುವುದು ಅಗತ್ಯ ಎಂದು ಡಾ.ಪ್ರಜ್ಞಾ ಹರಿಪ್ರಸಾದ ತಿಳಿಸಿದರು.
ಪಟ್ಟಣದ ನವಯುಗ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದÀರು.
ಕಾರ್ಯಕ್ರಮದಲ್ಲಿ ಪುರಸಭೆ ಹಿರಿಯ ಸದಸ್ಯ ರಾಜಾ ಮಹೇಂದ್ರನಾಯಕ, ನವಯುಗ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶರಣಬಸವ ಸೀಕಲ್ ನವಯುಗ ಶಿಕ್ಷಣ ಸಂಸ್ಥೆಯ ಅಡಳಿತಾಧಿಕಾರಿ ಎನ್. ನರಸಿಂಹಲು, ಶೇಖ್ಅತಾರ, ಸಿದ್ಧಾರ್ಥವಲ್ಲಭ, ಹಿರಿಯಉಪನ್ಯಾಸಕ ಸತ್ಯನಾರಾಯಣ ಭಂಡಾರಿ, ಟಿ.ಸುಮಾ ಹೊಸಮನಿ, ಹನುಮಂತಪ್ಪ ಕೊಟ್ನೆಕಲ್,ಸೇರಿದಂತೆ ಇನ್ನಿತರರು ಇದ್ದರು.