Friday, 3rd February 2023

ದೂರವಾಣಿ ಕರೆಗೆ ಈಶ್ವರಪ್ಪ ಗಲಿಬಿಲಿ: ಬೆಂಗಳೂರಿಗೆ ದೌಡು

KSE

ಮೈಸೂರು: ದೂರವಾಣಿ ಕರೆಯೊಂದು ಬಂದ ತಕ್ಷಣ ಗಲಿಬಿಲಿಗೊಂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ದಿಢೀರನೆ ಮೈಸೂರಿನಿಂದ ಬೆಂಗಳೂರಿನತ್ತ ದೌಡಾಯಿಸಿದ ಘಟನೆ ನಡೆದಿದೆ.

ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವರ ವಿರುದ್ಧ ಉಡುಪಿಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

ನಿನ್ನೆಯಿಂದ ಮೈಸೂರಿನಲ್ಲೆ ವಾಸ್ತವ್ಯ ಹೂಡಿದ್ದ ಸಚಿವ ಈಶ್ವರಪ್ಪ ಬುಧವಾರ ಖಾಸಗಿ ಹೋಟೆಲ್ ನಲ್ಲಿ ಉಪಹಾರ ಸೇವಿಸುತ್ತಿದ್ದಂತೆ ಮೊಬೈಲ್ ಗೆ ದೂರವಾಣಿ ಕರೆ ಬಂದಿದೆ. ಇದರಿಂದ ಗಲಿಬಿಲಿಗೊಳಗಾದ ಸಚಿವರು 15 ನಿಮಿಷಗಳ ಕಾಲ ಏಕಾಂಗಿಯಾಗಿ ಆತಂಕದಿಂದಲೇ ಮಾತನಾಡಿದ್ದಾರೆ.

ಫೋನ್ ಕರೆ ಬರುತ್ತಿದ್ದಂತೆ ಆತಂಕಿತರಾಗಿ ಪೋನ್ ಕರೆ ಕಟ್ ಆಗುತ್ತಿದ್ದಂತೆ ಆತುರಾತುರವಾಗಿ ಕಾರನ್ನೇರಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

error: Content is protected !!