Thursday, 19th May 2022

ಎಂಸಿಐ ಮಾನ್ಯತೆಗೆ ಇಎಸ್‌ಐಸಿ ವಾಮಮಾರ್ಗ

ಯಾವುದೇ ವೈದ್ಯಕೀಯ ಕಾಲೇಜು ಮೆಡಿಕಲ್ ಕೌನ್ಸಿಿಲ್ ಆಫ್ ಇಂಡಿಯಾ (ಎಂಸಿಐ) ಮಾನ್ಯತೆ ಪಡೆಯಬೇಕಾದರೆ ಕೆಲವೊಂದು ಮಾನದಂಡಗಳನ್ನು ಅನುಸರಿಸುವುದು ಕಡ್ಡಾಾಯವಾಗಿರುತ್ತದೆ. ಆದರೆ ಬೆಂಗಳೂರಿನ ಪ್ರಸಿದ್ಧ ಇಎಸ್‌ಐಸಿ ಸ್ನಾಾತಕೋತ್ತರ ಸಂಸ್ಥೆೆ ಮತ್ತು ವೈದ್ಯಕೀಯ ಕಾಲೇಜು ಸುಳ್ಳು ಮಾಹಿತಿ ನೀಡಿ ಮಾನ್ಯತೆ ಮತ್ತು ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ.
ಎಂಸಿಐನ 2002ರ ಸೆಕ್ಷನ್ 7 ಪ್ರಕಾರ ಮೆಡಿಕಲ್ ಕಾಲೇಜಿನಲ್ಲಿ ಇರಬೇಕಾದ ಬೋಧಕ ಸಿಬ್ಬಂದಿ ಮತ್ತು ಹಾಸಿಗೆಗಳು ಲಭ್ಯವಿಲ್ಲದಿದ್ದರೂ ತಪ್ಪುು ಮಾಹಿತಿ ನೀಡಿ ಮಾನ್ಯತೆ ಪಡೆಯಲಾಗಿದೆ. ಈ ಕುರಿತು ತೀವ್ರ ತನಿಖೆ ನಡೆಸಿದ ಎಂಸಿಐ ಕಾನೂನು ಬಾಹಿರವಾಗಿ ಮಾನ್ಯತೆ ಪಡೆದಿರುವುದು ಎಂದು ಖಚಿತಪಡಿಸಿದೆ. ಎಂಸಿಐ ಚಾಟಿ ಬೀಸಿದ ಬೆನ್ನಲ್ಲೆೆ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳು ಯಾವುದೇ ಉತ್ತರ ನೀಡದೆ ಮೌನಕ್ಕೆೆ ಜಾರಿದ್ದಾಾರೆ.

ರಾಜಾಜಿನಗರ ಇಎಸ್‌ಐಸಿ ಸ್ನಾಾತಕೋತ್ತರ ಸಂಸ್ಥೆೆ ಮತ್ತು ವೈದ್ಯಕೀಯ ಕಾಲೇಜು ಮಾನ್ಯತೆ ಪಡೆಯುವ ವೇಳೆ ನಿಯಮಗಳ ಪ್ರಕಾರ ಇರಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳದೆ ಪೀಣ್ಯ ಇಎಸ್‌ಐಸಿ ಆಸ್ಪತ್ರೆೆಯಲ್ಲಿ ಕಾರ್ಯನಿರ್ವಹಿಸುತ್ತಿಿರುವ 6ವೈದ್ಯರನ್ನು ಇಲ್ಲಿನ ಅಧ್ಯಾಾಪಕರೆಂದು ಪಟ್ಟಿಿ ನೀಡಿದೆ. ಅಲ್ಲದೇ, ಆಸ್ಪತ್ರೆೆಯಲ್ಲಿರುವ ಹಾಸಿಗೆಗಳ ಸಂಖ್ಯೆೆಯನ್ನು ತಪ್ಪಾಾಗಿ ನೀಡಿದ್ದು, ಎಂಸಿಐನಿಂಧ ಛೀಮಾರಿ ಹಾಕಿಸಿಕೊಂಡಿದೆ. ಆಸ್ಪತ್ರೆೆಯ ಮುಖ್ಯಸ್ಥರು , ವಿಭಾಗವಾರು ಮುಖ್ಯಸ್ಥರು ಮತ್ತು ವೈದ್ಯಕೀಯ ಸಿಬ್ಬಂದಿ ಮಾನ್ಯತೆಯ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದು, ಈ ವಿಷಯವಾಗಿ ಎಂಸಿಐ ಮುಂದಿನ ಕ್ರಮ ಕೈಗೊಳ್ಳಲಿದ್ದು, ತಕ್ಷಣ ಸಂಬಂಧ ಪಟ್ಟವರು ಸೂಕ್ತ ಉತ್ತರ ನೀಡಬೇಕೆಂದು ನೋಟೀಸ್‌ನಲ್ಲಿ ಸ್ಪಷ್ಟಪಡಿಸಿದೆ.
ಇಎಸ್‌ಐ ಆಸ್ಪತ್ರೆೆ ಈ ಹಿಂದೆ 80 ವೈದ್ಯರನ್ನು ಹೆಚ್ಚುವರಿ ಸಿಬ್ಬಂದಿ ಹೆಸರಿನಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ವರ್ಗಾವಣೆ ಮಾಡಿ ಸುದ್ದಿಯಾಗಿತ್ತು. ಕಾಲೇಜು ಮಾನ್ಯತೆ ಪಡೆಯುವ ವೇಳೆ ಪೀಣ್ಯ ಇಎಸ್‌ಐ ಆಸ್ಪತ್ರೆೆಯ ವೈದ್ಯರ ಲೆಕ್ಕ ನೀಡಿದಂತೆ 80 ವೈದ್ಯರ ವರ್ಗಾವಣೆ ಹಿಂದೆಯೂ ಕೃಷ್ಣನ ಲೆಕ್ಕ ನೀಡಿರಬಹುದೆಂಬ ಅನುಮಾನಗಳಿಗೆ ಮತ್ತಷ್ಟು ಪುಷ್ಟಿಿ ದೊರೆತಿದೆ. ಏಕಾಏಕಿ ವರ್ಗಾವಣೆಯನ್ನು ಪ್ರಶ್ನಿಿಸಿ ವೈದ್ಯರು ಕೇಂದೀಯ ಆಡಳಿತ ನ್ಯಾಾಯಾಧೀಕರಣದಲ್ಲಿ ದಾವೆ ಹೂಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿಿದೆ.

ರೋಗಿಗಳಿಗೆ ಪ್ರತಿದಿನ ಪಿಜಿ ವೈದ್ಯರು ಚಿಕಿತ್ಸೆೆ ನೀಡುತ್ತಿಿದ್ದು, ಹೆಚ್ಚಿಿನ ಮಾಹಿತಿಯನ್ನು ಹಿರಿಯ ವೈದ್ಯರ ಬಳಿ ಕೇಳಲು ಹೇಳುತ್ತಿಿದ್ದಾಾರೆ. ಆದರೆ, ಹಿರಿಯ ವೈದ್ಯರು ವಾರ್ಡ್‌ಗಳಿಗೆ ಬರುತ್ತಿಿಲ್ಲ ಎಂಬ ದೂರು ಕೇಳಿ ಬಂದಿದೆ. 500 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆೆಯಲ್ಲಿ ದಿನದಿಂದ ದಿನಕ್ಕೆೆ ರೋಗಿಗಳ ಸಂಖ್ಯೆೆ ಹೆಚ್ಚಾಾಗುತ್ತಿಿದೆ. ಹೀಗಾಗಿ ಒಳರೋಗಿಗಳು ಹಾಸಿಗೆಗಾಗಿ ಪರದಾಡುವಂತಾಗಿದೆ. ಚಿಕಿತ್ಸೆೆ, ಪ್ರಯೋಗಾಲಯ ಪರೀಕ್ಷೆಗಾಗಿ ದಿನಗಟ್ಟಲೆ ಕಾಯಬೇಕಾಗಿದೆ. ಈ ಹಿಂದೆ 80 ವೈದ್ಯರನ್ನು ಹೆಚ್ಚುವರಿ ನೆಪವೊಡ್ಡಿಿ ವರ್ಗಾವಣೆ ಮಾಡಿ ಇದೀಗ ಅನಸ್ತೇಶಿಯಾ, ಇಎನ್‌ಟಿ, ಟಿಬಿ ಸೇರಿದಂತೆ ಇತರೆ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿಿದೆ.

ಕ್ರಮ ಕೈಗೊಂಡರೆ 400 ವಿದ್ಯಾಾರ್ಥಿಗಳ ಭವಿಷ್ಯ?
ಎಂಸಿಐಗೆ ತಪ್ಪುು ಮಾಹಿತಿ ನೀಡಿ ಮಾಣ್ಯತೆಗೆ ನಡೆಸಿದ್ದ ಕಸರತ್ತಿಿನಿಂದ ಇಎಸ್‌ಐಸಿ ಸ್ನಾಾತಕೋತ್ತರ ಸಂಸ್ಥೆೆ ಮತ್ತು ವೈದ್ಯಕೀಯ ಕಾಲೇಜು ಅಧಿಕಾರಿಗಳು ಬಲೆಗೆ ಬಿದ್ದಂತಾಗಿದೆ. ಆದರೆ ಇಲ್ಲಿ ಎದುರಾಗಿರುವ ಪ್ರಶ್ನೆೆ ಏನೆಂದರೆ ಎಂಸಿಐ ಸೂಕ್ತ ಕ್ರಮ ಕೈಗೊಂಡರೆ ಸಂಸ್ಥೆೆಯಲ್ಲಿ ವ್ಯಾಾಸಂಗ ಮಾಡುತ್ತಿಿರುವ ವಿದ್ಯಾಾರ್ಥಿಗಳ ಭವಿಷ್ಯ ಏನಾಗಬೇಕು?. ಇಲ್ಲಿ ವಿದ್ಯಾಾಭ್ಯಾಾಸ ಮಾಡುತ್ತಿಿರುವ ವಿದ್ಯಾಾರ್ಥಿಗಳು ಬಡ ಕುಟುಂಬದವರು. ಇಲ್ಲಿ ಬೋಧಕರು ಇಲ್ಲದೆ ಇರುವುದರಿಂದ ಪಾಠ ಪ್ರವಚನಗಳು ನಡೆಯುತ್ತಿಿಲ್ಲ. ಸರಕಾರಿ ಶಿಕ್ಷಣ ಸಂಸ್ಥೆೆಯೊಂದು ವಿದ್ಯಾಾರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿಿರುವುದು ತಿಳಿದು ಬಂದಿದೆ.

ಇಎಸ್‌ಐ ಆಸ್ಪತ್ರೆೆಯಲ್ಲಿ ಆರು ಭೂತಗಳು!
ರಾಜಾಜಿನಗರದ ರಾಜಾಜಿನಗರ ಇಎಸ್‌ಐಸಿ ಸ್ನಾಾತಕೋತ್ತರ ಸಂಸ್ಥೆೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಆರು ಬೋಧಕರ ಪಟ್ಟಿಿಯನ್ನು ಎಂಸಿಐಗೆ ಕಳುಹಿಸಲಾಗಿದೆ. ಆದರೆ ಒಂದು ವರ್ಷದಿಂದ ಆರು ಮಂದಿ ಸೇವೆ ಸಲ್ಲಿಸಿರುವ ಕುರಿತು ಯಾವುದೇ ದಾಖಲೆಗಳಿಲ್ಲದ ಕಾರಣ ಅಂತಹ ಪ್ರಾಾಧ್ಯಾಾಪಕರನ್ನು ಎಂಸಿಐ ಭೂತಗಳಿಗೆ ಹೋಲಿಕೆ ಮಾಡಿದೆ. ಇಎಸ್‌ಐನಲ್ಲಿ ಕಾರ್ಯ ನಿರ್ವಹಿಸುತ್ತಿಿರುವ ಮುಖ್ಯಸ್ಥರು ಸ್ಪಷ್ಟನೆ ನೀಡಲು ನೊಟೀಸ್ ನೀಡಲಾಗಿದೆ.