Wednesday, 1st December 2021

ಮಕ್ಕಳ ವಿಕಾಸಕ್ಕೆ ಪೂರಕ ಕಾರ್ಯಕ್ರಮಕ್ಕೆ ಟಿವಿ ಚಾನೆಲ್‌ಗಳು ಒತ್ತು ನೀಡಲಿ

ಪ್ರಚಲಿತ

ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು

ತೇಜಸ್‌ನಂತಹ ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕೆಲ ಸಮಾಜಮುಖಿಯ ಮನಸ್ಸುಗಳನ್ನು, ವ್ಯಕ್ತಿತ್ವವನ್ನು ಎಲ್ಲಕ್ಕಿಿಂತ ಮುಖ್ಯವಾಗಿ ತಮಗಿರುವ ಜ್ಞಾಾನಕ್ಕೆೆ ಕನ್ನಡಿ ಹಿಡಿಯುವ ಅವಕಾಶವನ್ನು ನೀಡುತ್ತಿಿರುವುದು ಟಿವಿ ಮಾಧ್ಯಮದಿಂದಾಗುತ್ತಿರುವ ಒಳ್ಳೆೆಯ ಬೆಳವಣಿಗೆ.

ಮೂಲತಃ ಗುಲಾಮಗಿರಿಯ ಅನುಕೂಲತೆಯ ಅಸ್ತ್ರವಾಗಿ ಸೃಷ್ಟಿಿಗೊಂಡ ಟಿವಿ ಎಂಬ ವಿದ್ಯುತ್ ಸಾಧನ ಇಂದು ಸಮಾಜದಲ್ಲಿ ದೈತ್ಯಾಾಕಾರವನ್ನು ಪಡೆದಿದೆ. ಸಾಮಾಜಿಕ ಜಾಲತಾಣಗಳು ಹುಟ್ಟುವವರೆಗೂ ಇದು ಪ್ರತಿಯೊಬ್ಬರನ್ನು ತನ್ನ ಮುಂದೆ ಕೂರುವಂತೆ ಮಾಡುತ್ತಿಿದ್ದ ಮಹಾ ಸ್ವಾಾರ್ಥಿಯಾಗಿತ್ತು. ಆದರೆ, ಈಗ ಟಿವಿ ಎಂಬ ಪರದೆಯೇ ಪ್ರತಿಯೊಬ್ಬರ ಜೇಬಿನೊಳಗೆ ಕುಳಿತಿದೆ. ಮೊಬೈಲ್‌ನೊಳಗೆ ಬಂಧಿಯಾಗಿ, ನಾವುಗಳು ಟಿವಿಯನ್ನು ಮೂರ್ಖರ ಪೆಟ್ಟಿಿಗೆ ಕರೆದರೂ ಅದು ಸಮಾಜವನ್ನು ಬದಲಿಸುವ ಒಂದು ಉತ್ತಮ ಸಾಧನ ಎಂಬುದು ಸತ್ಯ. ಹಿಂದಿ ಚಿತ್ರರಂಗದ ಮೇರುನಟ ಅಮಿತಾಭ್ ಬಚ್ಚನ್ ‘ಕೂಲಿ’ ಚಿತ್ರದಲ್ಲಿ ಅಪಘಾತ ಮಾಡಿಕೊಂಡು ತನ್ನ ವೃತ್ತಿಿ ಬದುಕು ಅಷ್ಟೇ ಎಂದು ಕೊಂಡಾಗ ಮತ್ತೆೆ ತಲೆಎತ್ತಿಿ ನಿಂತಿದ್ದನ್ನು ನೋಡಿದ್ದೇವೆ. ಹಾಗೆಯೇ ಮತ್ತೊೊಮ್ಮೆೆ ಅವರ ಚಿತ್ರಗಳು ‘ಓಡುವುದು’ ನಿಂತು ಅವರ ತಾರಾ ವರ್ಚಸ್ಸಿಿಗೆ ಧಕ್ಕೆೆ ಬರುವುದೆಂಬ ಚಿಂತೆಯ ಜತೆಗೆ ಆರ್ಥಿಕ ಸಮಸ್ಯೆೆಗಳು ಎದುರಾದಾಗ ಮತ್ತೆೆ ಅವರು ದೇಶದಲ್ಲಿ ಬಿಗ್ ಬಿ ಕರೆಸಿಕೊಂಡು ಫಿನಿಕ್‌ಸ್‌‌ನಂತೆ ಎದ್ದು ಬಂದು ನಿಲ್ಲಲು ಸಹಕಾರಿಯಾದದ್ದು ಇದೇ ‘ಮೂರ್ಖರ ಪೆಟ್ಟಿಿಗೆ’ ಎಂದರೆ ನಂಬಲೇ ಬೇಕು.

ಅದು 2000ರ ವರ್ಷದಲ್ಲಿ ಸ್ಟಾಾರ್ ಪ್ಲಸ್ ಚಾನೆಲ್‌ನವರು ಬ್ರಿಿಟಿಷ್‌ನ ಜನಪ್ರಿಿಯ ಕಾರ್ಯಕ್ರಮವಾದ ‘ಹೂ ವಾಂಟ್‌ಸ್‌ ಟು ಬಿ ಮಿಲಿಯನೇರ್’ನ್ನು ಹಿಂದಿ ಅವತಾರಣಿಕೆಯ ಕೌನ್ ಬನೇಗಾ ಕರೋಡ್ ಪತಿ ಎಂಬ ಸ್ಪರ್ಧಾ ಕಾರ್ಯಕ್ರವನ್ನು ನಡೆಸಲು ಆಲೋಚಿಸಿದಾಗ ಅದಕ್ಕೆೆ ಸಮರ್ಥ ವ್ಯಕ್ತಿಿಯಾಗಿ ಅಮಿತಾಭ್ ಬಚ್ಚನ್ ಅವರನ್ನು ನೇಮಿಸುತ್ತದೆ. ಅಲ್ಲಿಂದ ಶುರವಾದ ದೇಶದ ಅತಿದೊಡ್ಡ ಜನಪ್ರಿಿಯ ಕಾರ್ಯಕ್ರಮ ಇಂದಿಗೂ ಭಾರತದ ಅನೇಕ ಭಾಷೆಗಳಲ್ಲಿ ಬಿತ್ತರಗೊಳ್ಳುತ್ತಿಿದೆ. ಈ ಕಾರ್ಯಕ್ರಮ ಬರಿಯ ಮನರಂಜನೆ ಮಾತ್ರವಲ್ಲದೇ
ಜ್ಞಾಾನಾರ್ಜನೆಗೂ ಬಲು ಸಹಕಾರಿಯಾಗಿ ವೀಕ್ಷಕರನ್ನು ಸೆಳೆದಿದೆ. ಆ ಹಾಟ್‌ಸೀಟ್‌ನಲ್ಲಿ ಕೂರಬೇಕೆಂಬ ಮಹದಾಸೆ ಪ್ರತಿ ವಿದ್ಯಾಾವಂತ ನಾಗರಿಕನಿಗೂ ವಿದ್ಯಾಾರ್ಥಿಗಳಿಗೂ ಇರುವುದು ಸುಳ್ಳಲ್ಲ. ಮುಂದೆ ಅಮಿತಾಭ್ ಬಚ್ಚನ್ ಅವರ ಜೀವನದಲ್ಲಿ ನಡೆದದ್ದೆೆಲ್ಲಾಾ ಇತಿಹಾಸ. ಈ ಕಾರ್ಯಕ್ರಮದ ಕಳೆದ 19 ವರ್ಷಗಳಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಕೋಟಿರುಗಳನ್ನು ನೀಡಿರಬಹುದು ಆದರೆ, ಈ ಕಾರ್ಯಕ್ರಮದಿಂದ ಲಕ್ಷಾಂತರ ಕೋಟಿ ರು.ಗಳ ವ್ಯವಹಾರ ಒಂದು ದಾಖಲೆಯಾಗಿದೆ.

ಇದನ್ನೆೆಲ್ಲಾಾ ಇಲ್ಲಿ ಹೇಳಲು ಕಾರಣವೆಂದರೆ ಮೊನ್ನೆೆ ಕನ್ನಡದಲ್ಲಿ ಪ್ರಸಾರವಾಗುವ ವರನಟ ರಾಜ್ ಅವರ ಪುತ್ರ ಪುನೀತ್ ರಾಜ್‌ಕುಮಾರ್ ನಡೆಸಿಕೊಡುವ ‘ಕನ್ನಡದ ಕೋಟ್ಯಧಿಪತಿ’ ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಜ್ಯೋೋತ್ಸವದ ವಿಶೇಷವಾಗಿ ಸರಕಾರಿ ಶಾಲೆಗಳ ವಿದ್ಯಾಾರ್ಥಿಗಳಿಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಆರು ಲಕ್ಷ ರು.ಗಳನ್ನು ಗಳಿಸಿದ ಹಾಸನದ ವಿದ್ಯಾಾರ್ಥಿ ತೇಜಸ್ ಮರುದಿನವೇ ಸಮಾಜದ ಆದರ್ಶ ವಿದ್ಯಾಾರ್ಥಿಯಾಗಿ ಹೋದ. ಆತ ಗಳಿಸಿದ ಹಣದಿಂದ ತನ್ನ ಶಾಲೆಗೆ ಕಾಂಪೌಡ್‌ನ್ನು ವಿನಿಯೋಗಿಸಿ ಉಳಿದ ಹಣದಲ್ಲಿ ತನ್ನ ಅಕ್ಕನಿಗೆ ಮದುವೆ ಮಾಡಲು ನೆರವಾಗುತ್ತೇನೆಂದು ಘೋಷಿಸಿದ. ಅದು ಆತ ಶಾಲೆಗೆ ಕಾಂಪೌಂಡ್ ಕಟ್ಟಿಿಸಲು ನೀಡಿದ ಕಾರಣವೂ ಆಶ್ಚರ್ಯಕರವಾಗಿತ್ತು. ತನ್ನ ಶಾಲೆಯ ಆವರಣದಲ್ಲಿ ಪ್ರತಿದಿನ ನೆಡುವ ಸಸಿಗಳನ್ನು ಜಾನುವಾರುಗಳು ತಿಂದುಬಿಡುತ್ತವೆ ಎಂದು ಹೇಳಿದ್ದು.

ಸಸಿ ನೆಟ್ಟು ಮರ ಬೆಳೆಸುವ ಆತನ ಪ್ರಾಾಮಾಣಿಕ ಉದ್ದೇಶ ಸಮಸ್ತ ವಿದ್ಯಾಾರ್ಥಿಗಳಿಗೆ ಮಾದರಿಯಾಗಿತ್ತು. ನೋಡಿ ಟಿವಿಯ ಇಂತಹ ಒಂದು ಅಪರೂಪದ ಕಾರ್ಯಕ್ರಮ ತೇಜಸ್‌ನಂತಹ ವಿದ್ಯಾಾರ್ಥಿಯ ದೃಷ್ಠಿಿಕೋನ ಸಾಮರ್ಥ್ಯ ಭವಿಷ್ಯದ ಕನಸುಗಳನ್ನು ಅದಕ್ಕಿಿಂತ ಹೆಮ್ಮೆೆ ಆ ಕಾರ್ಯಕ್ರಮಕ್ಕೆೆ ಮತ್ತು ಅದನ್ನು ನಡೆಸುವ ಟಿವಿ ವಾಹಿನಿಗೆ ಇನ್ನೇನು ಬೇಕು ಹೇಳಿ. ಒಮ್ಮೆೆ ನಮ್ಮ ಕನ್ನಡ ಟಿವಿ ಚಾನೆಲ್‌ಗಳಲ್ಲಿನ ಧಾರಾವಾಹಿಗಳ ಪಟ್ಟಿಿನೋಡಿ, ಕಲರ್ಸ್ ಕನ್ನಡದ ಇವಳು ಸುಜಾತ, ಮಿಥುನರಾಶಿ, ನಮ್ಮನೆ ಯುವರಾಣಿ, ಮಂಗಳಗೌರಿ ಮದುವೆ, ಲಕ್ಷ್ಮಿಿ ಭಾರಮ್ಮ, ಅಗ್ನಿಿಸಾಕ್ಷಿ, ರಂಗನಾಯಕಿ, ಬಿಗ್‌ಬಾಸ್, ಸೀತಾವಲ್ಲಭ, ರಕ್ಷಾಬಂಧನ. ಸುವರ್ಣ ಚಾನೆಲ್‌ನ ಅರಮನೆ ಗಿಳಿ, ಇಂತಿ ನಿಮ್ಮ ಪ್ರೀತಿಯ, ಸತ್ಯಂಶಿವಂಸುಂದರಂ, ಮರಳಿ ಬಂದಳು ಸೀತೆ, ಮುದ್ದುಲಕ್ಷ್ಮಿಿ, ಪ್ರೇಮಲೋಕ, ವರಲಕ್ಷ್ಮಿಿ ಬಯಸದೇ ಬಳಿಬಂದೆ, ಸಿಂಧೂರ, ಸರ್ವ ಮಂಗಳ ಮಾಂಗಲ್ಯೆೆ, ಶೃತಿ ಸೇರಿದಾಗ, ಗಾನಬಜಾನ. ಜೀ ವಾಹಿನಿಯ ರಾಧಾ ಕಲ್ಯಾಾಣ, ಸುಬ್ಬಲಕ್ಷ್ಮಿಿ ಸಂಸಾರ, ಕಮಲಿ, ಯಾರೇ ನೀ ಮೋಹಿನಿ, ಗಟ್ಟಿಿಮೇಳ, ಜತೆಜತೆಯಲಿ, ನಾಗಿಣಿ, ಪಾರು, ಬ್ರಹ್ಮಗಂಟು, ಡ್ಯಾಾನ್‌ಸ್‌ ಕರ್ನಾಟಕ, ಕಾಮಿಡಿ ಕಿಲಾಡಿಗಳು.

ಕಲರ್ಸ್ ಸೂಪರ್‌ನ ಸೂಪರ್ ದಂಪತಿ, ಭೂಮಿ ತಾಯಾಣೆ, ಮಾಂಗಲ್ಯ ತಂತುನಾನೇನ, ಮಜಾ ಭಾರತ, ಸಿಲ್ಲಿಲಲ್ಲಿ, ಮಗಳು ಜಾನಕಿ, ಪಾಪಾ ಪಾಂಡು. ‘ಬ್ಲಾಾಕ್ ಬಸ್ಟರ್’ ಉದಯ ಟಿವಿಯ ದೇವಯಾನಿ, ಕಾವೇರಿ, ನಿವಾಸ, ನಾಯಕಿ, ಸೇವಂತಿ, ನಾನು ನನ್ನ ಕನಸು, ನಂದಿನಿ, ಜೀವನದಿ, ಕ್ಷಮ. ಈ ಧಾರಾವಾಹಿಗಳೆಲ್ಲಾಾ ಮಧ್ಯಾಾಹ್ನ ಆರಂಭಗೊಂಡರೆ ಮುಗಿಯುವುದು ರಾತ್ರಿಿ ಹನ್ನೊೊಂದಕ್ಕೆೆ. ಆನಂತರವೆಲ್ಲಾಾ ಮಿಡ್‌ನೈಟ್ ಮಸಾಲಗಳೇ.

ಈ ಪ್ರತಿ ಧಾರಾವಾಹಿಗಳಲ್ಲೂ ಇರುವ ಸಾಮ್ಯತೆ ಎಂದರೆ ಒಂದಾದರೂ ಅಕ್ರಮ, ಅಸಹಜ ಸಂಬಂಧಗಳಿರುತ್ತವೆ. ಮನೆ ಮುರುಕರು, ಮನೆಹಾಳರು ಪ್ರತಿ ಧಾರಾವಾಹಿಯಲ್ಲೂ ಸಿಗುತ್ತಾಾರೆ. ಕೆಲ ಧಾರಾವಾಹಿಗಳಲ್ಲಿ ದೇವರಿದ್ದರೆ ಕೆಲವಲ್ಲಿ ದೆವ್ವಗಳಿರುತ್ತದೆ. ಈಗ ಖರೆ ಹೇಳಿ ಇಷ್ಟೂ ಧಾರಾವಾಹಿಗಳಲ್ಲಿ ಮನೆಯ ಮಕ್ಕಳು, ವಿದ್ಯಾಾರ್ಥಿಗಳು ಯಾವ ಕೂತು ನೋಡಬಹುದು? ಅಥವಾ ಮಕ್ಕಳಿಗೆ ಈ ಧಾರಾವಾಹಿಯನ್ನು ನೋಡು ಎಂದು ಹೇಳಲು ಸಾಧ್ಯ? ಈ ಧಾರಾವಾಹಿಗಳ ಆಕ್ರಮಣದಿಂದಾಗಿ ಎಷ್ಟೋೋ ಮನೆಗಳಲ್ಲಿ ಗಂಡನಿಗೆ , ಮಕ್ಕಳಿಗೆ ಸರಿಯಾದ ಸಮಯಕ್ಕೆೆ ಕಾಫಿ-ಹಾಲು, ಊಟ ದೊರಕದಂತೆ ಮಾಡಿಬಿಟ್ಟಿಿವೆ. ಮನೆಯಾಕೆ ಮಧ್ಯಾಾಹ್ನವೇ ರಾತ್ರಿಿಊಟ, ಕಾಫಿ ತಿಂಡಿಗಳನ್ನು ಮಾಡಿ ಮುಗಿಸಿ ಸಂಜೆ ರಾತ್ರಿಿ ದೀರ್ಘ‘ ವಿಶ್ರಾಾಂತಿ’ಗೆ ಶರಣಾಗಿರುತ್ತಾಾಳೆ. ಗಂಡ ಬಂದು ಬಿಸಿಮಾಡಿಕೊಂಡು ಉಣಬೇಕಷ್ಟೆೆ. ಈ ಎಲ್ಲಾಾ ಧಾರಾವಾಹಿಗಳ ನೋಡುಗರನ್ನು ಏಕಕಾಲಕ್ಕೆೆ ಆಕರ್ಷಿಸುವ ಅನುಬಂಧ, ಜೀ ಕುಟುಂಬ ಹಬ್ಬಗಳನ್ನು ಆಚರಿಸುವ ಚಾನಲ್‌ಗಳು ಅದರಲ್ಲೂ ಭರ್ಜರಿ ಟಿಆರ್‌ಪಿ ಬಾಚುತ್ತವೆ.

ಬುದ್ಧಿಿ ಜ್ಞಾಾನ ವಿಕಾಸ, ಜ್ಞಾಾನಾರ್ಜನೆಯಾಗುವಂತ ಶೈಕ್ಷಣಿಕ ತಳಹದಿಯ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಎಲ್ಲಾಾ ಚಾನೆಲ್‌ಗಳಲ್ಲೂ ಪೈಪೋಟಿಯಾಗಿ ಹೆತ್ತವರು ಮಕ್ಕಳಿಗೆ ಇದನ್ನು ನೋಡಲೇಬೇಕೆಂದು ಕೂರಿಸುವಂತ ಕಾರ್ಯಕ್ರಮಗಳನ್ನು ನಮ್ಮ ಕನ್ನಡ ವಾಹಿನಿಗಳು ಹೆಚ್ಚೆೆಚ್ಚು ಪ್ರಸಾರಮಾಡಲಿ.

ಸರಿಗಮಪ, ಕನ್ನಡ ಕೋಗಿಲೆಯಂತಹ ಕಾರ್ಯಕ್ರಮ ಸ್ವಲ್ಪಮಟ್ಟಿಿಗೆ ಪುಟ್ಟ ,ಪ್ರತಿಭಾವಂತರ ಮೇಲೆ ಬೆಳಕು ಚಲ್ಲುತ್ತಿಿತ್ತು. ಡ್ರಾಾಮಾ ಜೂನಿಯರ್‌ಸ್‌ ಆರಂಭಗೊಂಡು ಜಾತಿ ವಿವಾದದಿಂದ ಕಳೆಗುಂದಿತು. ರಮೇಶ್ ಅವರ ವೀಕೆಂಡ್ ಸಾಧಕರ ಬದುಕನ್ನು ಪರಿಚಯಿಸುವ ಉತ್ತಮ ಕಾರ್ಯಕ್ರಮವಾದರೂ ಅದರಲ್ಲಿ ಕೆಲ ಅರೆ ಸಾಧಕರು ದಿಢೀರ್ ಸಾಧಕರು ಹಾಜರಾಗಿದ್ದು ಗಂಭೀರತೆಯನ್ನು ಕಳೆದು ಕೊಂಡಿತು. ಕಿರುತೆರೆಯ ಪುಟ್ಟಣ್ಣ ಕಣಗಾಲ್ ಎನಿಸಿರುವ ಟಿ.ಎನ್.ಸೀತಾರಾಂ ಅವರ ಮೇಲಿನ ‘ಮ’ಮಕಾರಿಂದ ಗಂಭೀರ ವೀಕ್ಷಕರು ನಿರೀಕ್ಷೆಯಿಂದ ನೋಡುತ್ತಿಿರುವ ಮಗಳು ಜಾನಕಿ ಧಾರಾವಾಹಿಯು ಜೆಡಿಎಸ್ ಪಕ್ಷದ ವಂಶ ರಾಜಕಾರಣದಂತೆ ಅದರಲ್ಲಿನ ಲಾಯರ್, ಹೆಂಡತಿ, ಗಂಡ, ಮಗಳು, ಮಗ, ಉದ್ಯಮಿ, ಪೊಲೀಸ್, ರಾಜಕಾರಣಿ ಎಲ್ಲರೂ ಸಂಬಂಧಿಗಳೇ ಆಗಿರುವುದು ದುರದೃಷ್ಟಕರ.

ಇನ್ನು ಮಜಾ ಭಾರತ, ಕಾಮಿಡಿ ಕಿಲಾಡಿಗಳೆಂಬ ಷೋಗಳು ಕಾಶಿನಾಥ್ ಅವರ ಡಬಲ್ ಮೀನಿಂಗ್‌ನ್ನು ನಾಚಿಸುವ, ಅಶ್ಲೀಲ ಹಾಸ್ಯಗಳ ವೇದಿಕೆಯಾಗಿದೆ. ಅದರಿಂದ ಅದರ ತೀರ್ಪುಗಾರರು ನಿರೂಪಕರು ಮಾತ್ರ ವಿಕಾರವಾಗಿ ಖುಷಿಪಡುವಂತಾಗಿದೆ. ಮಜಾ ಟಾಕೀಸ್ ಎಂಬ ಮನರಂಜನೆ ಸದ್ಯಕ್ಕೆೆ ನಿಂತು ಹೋಗಿದೆ. ಹಾಗೆಯೇ ಬಿಗ್‌ಬಾಸ್ ಎಂಬುದು ಮನುಷ್ಯರು ಇರುವ ಝೂ ಒಂದನ್ನು ನೋಡುವಂತಾಗಿದೆ. ವಿಕಾರ- ವಿಕೃತಿ ಜಗಳ ರಂಪಾಟವೇ ಇದರ ಪ್ರಮುಖ ಆಕರ್ಷಣೆ ಎಂದರೆ ತಪ್ಪಲ್ಲ. ಇದನ್ನು ವಾರದ ಕೊನೆಯಲ್ಲಿ ವಿಶ್ಲೇಷಿಸುವ ಸುದೀಪ್ ಅವರ ಜಾಣ್ಮೆೆ, ಮಾತು, ಟೈಮಿಂಗ್, ಬುದ್ಧಿಿವಂತಿಕೆ, ಪ್ರಬುದ್ಧತೆ, ಮಾತ್ರ ಮೆಚ್ಚುವಂತ್ತದ್ದು. ಇವುಗಳ ಮಧ್ಯದಲ್ಲಿ ರಾಘವೇಂದ್ರ ಹೆಗಡೆಯಂತ ನಿರ್ದೇಶಕರು ಶನಿ, ಮಹಾಕಾಳಿಯಂತಹ ಪೌರಾಣಿಕ ಧಾರಾವಾಹಿಗಳನ್ನು ನೀಡಿದರೂ ಅದು ಮುಂದುವರೆಯುವಷ್ಟು ಟಿಆರ್‌ಪಿ ದಕ್ಕಲಿಲ್ಲ.

ಪ್ಯಾಾಟೆಗೆ ಬಂದ ಯುವಕ ವಾಪಸ್ ಮರಳಲೇ ಇಲ್ಲ. ಸುನಾಮಿ ಎಂಬವನೊಬ್ಬ ಬೇನಾಮಿಯಾಗಿದ್ದು ದುರಂತ. ಇನ್ನು ಸಿನಿಮಾ ನೋಡಲು ಕುಳಿತರೆ ಬಿಡುಗಡೆಗೊಂಡು ಒಂದೇ ವಾರಕ್ಕೆೆ ಚಿತ್ರ ಮಂದಿರದಿಂದ ಬಿಡುಗಡೆಗೊಂಡು ಕಣ್ಮರೆಯಾದ ಚಲನಚಿತ್ರಗಳನ್ನು ಬ್ಲಾಾಕ್ ಬಸ್ಟರ್, ಸೂಪರ್ ಹಿಟ್ ಬಹುಪರಾಕ್‌ನೊಂದಿಗೆ ತೋರಿಸಲಾಗುತ್ತಿಿದೆ. ಇನ್ನು ಸುದ್ದಿವಾಹಿನಿಗಳನ್ನು ನೋಡಬಹುದಾ ಅಂದರೆ ಈ ವಾಹಿನಿಗಳು ಸೆಲೆಬ್ರಿಿಟಿಗಳ ನಿಶ್ಚಿಿತಾರ್ಥ ಮದುವೆ, ಮುಂಜಿ, ನಾಮಕರಣಗಳ ವಿಡಿಯೊಗ್ರಾಾಫರ್ ಕೆಲಸಗಳನ್ನು ಮಾಡುತ್ತಿಿವೆೆ. ರಾಜಕಾರಣಿಗಳಲ್ಲ ಒಂದೊಂದು ಚಾನೆಲ್‌ನ್ನು ‘ಇಟ್ಟುಕೊಂಡಿದ್ದಾಾರೆ’. ಸುದ್ದಿ ವಾಹಿನಿಗಳ ನಿರೂಪಕರು ಶರಪಂಜರದ ಚಿತ್ರದ ಕಾವೇರಿಯಂತೆ ‘ನಾನು ನೋಡ್ದೆೆ ನಾನು ಕೇಳ್ದೆೆ’ ಎಂಬಂತೆ ಸಮ್ಮೋೋಹನಕ್ಕೆೆ ಒಳಗಾದವರಂತೆ ವರ್ತಿಸುತ್ತಿಿದ್ದಾಾರೆ.

ನಮ್ಮ ತೇಜಸ್‌ನಂತಹ ವಿದ್ಯಾಾರ್ಥಿಗಳನ್ನು ಬೆಳಕಿಗೆ ತರುವ ಕಾರ್ಯಕ್ರಮ. ಕನ್ನಡದ ಕೋಟ್ಯದಿಪತಿಯಂತಹ ಕಾರ್ಯಕ್ರಮ ಕೆಲ ಸಮಾಜಮುಖಿಯ ಮನಸ್ಸುಗಳನ್ನು, ವ್ಯಕ್ತಿಿತ್ವವನ್ನು ಎಲ್ಲಕ್ಕಿಿಂತ ಮುಖ್ಯವಾಗಿ ತಮಗಿರುವ ಜ್ಞಾಾನಕ್ಕೆೆ ಕನ್ನಡಿ ಹಿಡಿಯುವ ಅವಕಾಶವನ್ನು ನೀಡುತ್ತಿಿರುವುದು ಟಿವಿ ಮಾಧ್ಯಮದಿಂದಾಗುತ್ತಿಿರುವ ಒಳ್ಳೆೆಯ ಬೆಳವಣಿಗೆ. ಇನ್ನು ಮಕ್ಕಳು ನೋಡುವ ಕಾರ್ಯಕ್ರಮವನ್ನೆೆಲ್ಲಾಾ ಗುಡಿಸಿ ಪೋಗೋ ಕಾರ್ಟೂನ್ ನೆಟ್‌ವರ್ಕ್ ಟಿವಿಗಳಿಗೆ ತುಂಬಿಸಲಾಗಿದೆ. ಆದರೆ, ಈ ಚಾನಲ್‌ಗಳು ದುಬಾರಿಯಾಗಿರುವುದರಿಂದ ಅದನ್ನು ವರ್ಗದ ಕುಟುಂಬವು ಪಡೆಯುವುದಿಲ್ಲ. ಇದ್ದರೂ ಅದನ್ನೂ ನೋಡಲು ಮನೆಯಲ್ಲಿ ಅಮ್ಮಂದಿರ ಧಾರಾವಾಹಿಗಳು ಬಿಡುವುದಿಲ್ಲ.

ಕೆಲ ಮಕ್ಕಳು ಕ್ರಿಿಕೆಟ್ ಇನ್ನಿಿತರ ಆಟಗಳನ್ನು ನೋಡಲು ಟಿವಿ ಮುಂದೆ ಕುಳಿತರೆ ಮಕ್ಕಳು ಟಿವಿಯಿಂದ ಹಾಳಾಗ್ತಾಾರೆ ಹೊರಗಡೆ ಬಿಟ್ಟರೆ ಕೆಟ್ಟು ಹೋಗುತ್ತಾಾರೆ ಎನ್ನುತ್ತಾಾರೆ. ಹೀಗಾಗಿ ಮಕ್ಕಳು ಹೋಂ ವರ್ಕ್ ಮಾಡಿ ಮೆಲ್ಲಗೆ ಮೊಬೈಲ್ ಹಿಡಿದು ಕೊಠಡಿಗೆ ಸೇರುತ್ತಾಾರೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮೊದಲೆಲ್ಲಾಾ ಪ್ರತಿನಿತ್ಯವೂ ಪ್ರಸಾರವಾಗುತ್ತಿಿತ್ತು. ಆದರೆ, ಈ ಧಾರಾವಾಹಿಗಳ ಆರ್ಭಟಗಳ ಆಕ್ರಮಣಕ್ಕೆೆ ಒಳಗಾಗಿ ವಾರದಲ್ಲಿ ಬರಿಯ ಎರಡು ದಿನಗಳು ಮಾತ್ರ ಪ್ರಸಾರವಾಗುತ್ತಿಿರುವುದು ಕೋಟ್ಯಧಿಪತಿಯ ದುರಂತ. ಈ ಕಾರ್ಯಕ್ರಮದ ಗಂಭೀರತೆ ಎಷ್ಟಿಿದೆಯೆಂದರೆ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿಿ ಸೂರ್ಯರಂತವರೂ ಇದರಲ್ಲಿ ಭಾಗವಹಿಸಿ ಕೋಟಿಗೆ ಹತ್ತಿಿರಕ್ಕೆೆ ಬಂದದ್ದು ಒಂದು ಹೆಮ್ಮೆೆ ಎನಿಸಿದೆ. ಈಗ ಸುಧಾ ಮೂರ್ತಿಯಂತಹ ಸಮಾಜ ಸುಧಾರಕರು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವುದು ಈ ಕಾರ್ಯಕ್ರಮದ ತೂಕವನ್ನು ಹೆಚ್ಚಿಿಸಿದೆ.

ಇಂತಹದೇ ಜನಪ್ರಿಿಯತೆಯ ಭಾರಿಯ ಪುಸ್ತಕವನ್ನು ಬಹುಮಾನವಾಗಿ ನೀಡುವ ಚಂದನದ ಎನ್. ಸೋಮಶೇಖರ್ ಅವರ ‘ಥಟ್ ಹೇಳಿ’ ಎಲ್ಲಾಾ ವರ್ಗದವರಿಗೂ ಸವಾಲಿನ ಕಾರ್ಯಕ್ರಮವಾಗಿತ್ತು. ಬರಲಿ, ಇಂತಹ ಕಾರ್ಯಕ್ರಮಗಳು ಪ್ರತಿನಿತ್ಯ. ಮಕ್ಕಳು ಕುತೂಹಲದಿಂದ ನೋಡುವಂತಾಗಲಿ. ಅವರ ಜ್ಞಾಾನ ವಿಕಾಸಕ್ಕೆೆ ಅನುಕೂಲವಾಗುವ ಶೈಕ್ಷಣಿಕ ತಳಹದಿಯ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಎಲ್ಲ ಚಾನೆಲ್‌ಗಳಲ್ಲೂ ಪೈಪೋಟಿಯಾಗಿ ಪ್ರಸಾರಗೊಳ್ಳುವಂತಾಗಲಿ. ಹೆತ್ತವರು ಮಕ್ಕಳಿಗೆ ಇದನ್ನು ನೋಡಲೇಬೇಕೆಂದು ಕೂರಿಸುವಂತ ಕಾರ್ಯಕ್ರಮಗಳನ್ನು ನಮ್ಮ ಕನ್ನಡ ವಾಹಿನಿಗಳು ನಿರ್ಮಿಸುವಂತಾಗಲಿ. ಇಲ್ಲದಿದ್ದರೆ ಟಿವಿ ಎಂಬುದು ಮೂರ್ಖರ ಪೆಟ್ಟಿಿಗೆ ಎಂಬ ಮಾತಿಗೆ ಅನ್ವರ್ಥವಾಗುವುದರಲ್ಲಿ ಸಂಶಯವಿಲ್ಲ.