Wednesday, 1st February 2023

15 ರಲ್ಲಿ 3 ಗೆದ್ದರೆ ದಳಕ್ಕೆ ಕಳೆ, ಇಲ್ಲದಿದ್ದರೆ ಗುಳೆ!

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕಾಂಗ್ರೆೆಸ್ ಜತೆಗೂಡಿ 11 ತಿಂಗಳು ಮೈತ್ರಿಿ ಸರಕಾರ ನಡೆಸಿದ್ದ ಜೆಡಿಎಸ್ ವರಿಷ್ಠ ಕುಮಾರಸ್ವಾಾಮಿ ಅವರ ಪಕ್ಷ ಮಖಾಡೆ ಮಲಗಿದ್ದು, ಉಳಿಗಾಲಕ್ಕೆೆ ಉಪ ಚುನಾವಣೆಯೇ ಅಗ್ನಿಿಪರೀಕ್ಷೆೆ. 15 ಕ್ಷೇತ್ರಗಳಲ್ಲಿ ಐದು ಕ್ಷೇತ್ರ ಗೆದ್ದರೆ ಮಾತ್ರ ಪ್ರಾಾದೇಶಿಕ ಪಕ್ಷ ಜೆಡಿಎಸ್ ರಾಜ್ಯದಲ್ಲಿ ಭವಿಷ್ಯ ಕಾಣಲು ಸಾಧ್ಯ.

ಮೈತ್ರಿಿ ಸರಕಾರ ಉರುಳಿಸಲು ಸ್ವಪಕ್ಷದವರಾಗಿದ್ದ ಎಚ್.ವಿಶ್ವನಾಥ, ಗೋಪಾಲಯ್ಯ, ನಾರಾಯಣಗೌಡ ಅವರ ರಾಜೀನಾಮೆಯೇ ಕಾರಣ ಎಂದು ಪರಿಗಣಿಸಿರುವ ಎಚ್‌ಡಿಕೆ, ಉಪಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಬೇಕೆಂದು ತಂತ್ರಗಾರಿಕೆ ರೂಪಿಸುತ್ತಿಿದ್ದಾಾರೆ. ಮೈತ್ರಿಿ ಸರಕಾರ ಬಿದ್ದ ಬಳಿಕ ಹಾಗೂ ಪ್ರಮುಖ ಶಾಸಕರ ರಾಜೀನಾಮೆಯಿಂದಾಗಿ ಜೆಡಿಎಸ್‌ನಲ್ಲಿ ಬಿರುಕು ಉಂಟಾಗಿತ್ತು. ಬಳಿಕ ಪರಿಷತ್ ಸದಸ್ಯ ಪುಟ್ಟಣ್ಣ ಕೈ ಕೊಟ್ಟಿಿದ್ದು ಅಚ್ಚರಿ ಮೂಡಿಸಿತ್ತು. ಇನ್ನೂ ಕೆಲ ಪರಿಷತ್ ಸದಸ್ಯರು ಜೆಡಿಎಸ್‌ಗೆ ಗುಡ್‌ಬಾಯ್ ಹೇಳಲು ಮುಂದಾಗಿದ್ದು, ಉಪ ಚುನಾವಣೆಯ ಬಳಿಕ ತಮ್ಮ ನಿರ್ಧಾರ ಜನತೆ ಮುಂದಿಡಲಿದ್ದಾಾರೆ.

ಉಪ ಚುನಾವಣೆ ಜೆಡಿಎಸ್‌ಗೆ ಶತಾಯ ಗತಾಯವಾಗಿದ್ದು, ರಾಜ್ಯದಲ್ಲಿ ಏಕ ಪಕ್ಷ ಆಡಳಿತಕ್ಕೆೆ ಬರುವುದು ಕನಸಿನ ಮಾತು ಎಂದು ಅರಿತು, ಯಾವುದೇ ಪಕ್ಷ ಆಡಳಿತಕ್ಕೆೆ ಬಂದರೂ ಬೆಂಬಲ ಸೂಚಿಸುವುದು ಅನಿವಾರ್ಯವಾಗಿದೆ. ಇದಲ್ಲದೆ ಅವಕಾಶ ಸಿಕ್ಕರೆ ಜತೆಗೂಡಿ ಷರತ್ತುಬದ್ಧ ಸರಕಾರ ರಚನೆಗೆ ಅನುವು ಮಾಡಿಕೊಡಲು ಜೆಡಿಎಸ್ ಸಿದ್ಧವಾಗಿದೆ. ಇದೆಲ್ಲದ್ದಕ್ಕೂ ಮುಖ್ಯವಾಗಿ ಪಕ್ಷ ಸಂಘಟನೆ ಪಕ್ಷದ ವರಿಷ್ಠರ ಗುರಿಯಾಗಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಹೇಗಾದರೂ ಮಾಡಿ ನಿರ್ದಿಷ್ಟ ಕ್ಷೇತ್ರಗಳನ್ನು ಗೆಲ್ಲಲೇ ಬೇಕೆಂದು ಪಣ ತೊಟ್ಟಿಿದ್ದಾಾರೆ.

ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳ ಮುಂದೆ ಪ್ರಾಾದೇಶಿಕ ಪಕ್ಷಗಳು ಆಡಳಿತಕ್ಕೆೆ ಬರುವುದು ಸುಲಭದ ಮಾತಲ್ಲ. ಈಗಾಗಲೇ ಎರಡೂ ಪಕ್ಷದವರ ಜತೆ ಆಡಳಿತ ನಡೆಸಿರುವ ಎಚ್.ಡಿ.ಕುಮಾರಸ್ವಾಾಮಿ ಅವರು ಆಡಳಿತಕ್ಕಿಿಂತ ಪಕ್ಷದ ಅಸ್ವಿಿತ್ವ ಕಳೆದುಕೊಂಡಿದ್ದೆೆ ಹೆಚ್ಚು. ಬಿಜೆಪಿಗಿಂತ ಕಾಂಗ್ರೆೆಸ್ ಜತೆಗಿನ ಮೈತ್ರಿಿ ಪಕ್ಷದ ದುಸ್ಥಿಿತಿಗೆ ಕಾರಣವಾಗಿದ್ದು, ‘ಎಮ್ಮೆೆಗೆ ಜ್ವರ ಬಂದರೆ ಕೋಣಕ್ಕೆೆ ಬರೆ ಎಂದಾಗೆ’ ರಾಜೀನಾಮೆ ನೀಡಿದ ಶಾಸಕರ ಮೇಲೆ ಎಚ್‌ಡಿಕೆ ಗಧಪ್ರಹಾರ ಮಾಡುತ್ತಿಿದ್ದಾಾರೆ. ಏನೇ ಆಗಲಿ ಈ ಮೂರು ಕ್ಷೇತ್ರಗಳಲ್ಲಿ ನಾವೇ ಗೆಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆೆಸ್ ಗೆಲ್ಲಲಿ, ಅವರು ಮಾತ್ರ ಗೆಲ್ಲಬಾರದು ಎಂದು ಕುಮಾರಸ್ವಾಾಮಿ ನಿರ್ಧರಿಸಿದ್ದಾರೆ. ಅಷ್ಟಕ್ಕೆೆ ಸೀಮಿತವಾಗದೆ ಮಾಜಿ ದೋಸ್ತಿಿ ಪಕ್ಷದಿಂದ ಬಂಡೆದ್ದು ಹೋದ ಇನ್ನಿಿಬ್ಬರು ಅನರ್ಹರ ಮೇಲೂ ಕುಮಾರಸ್ವಾಾಮಿ ಹಟಕ್ಕೆೆ ಬಿದ್ದಿದ್ದಾರೆ.

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್ ಗೆಲ್ಲಬಾರದು. ಅದಕ್ಕೆೆ ಈಗಾಗಲೇ ಎಚ್‌ಡಿಕೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಬೆಂಬಲ ಕೊಟ್ಟಿಿದ್ದಾರೆ. ಬಚ್ಚೇಗೌಡರೊಂದಿಗಿನ ಮುನಿಸನ್ನು ಬದಿಗಿಟ್ಟು ಎಂಟಿಬಿ ನಾಗರಾಜ್ ಅವರನ್ನು ಟಾರ್ಗೆಟ್ ಮಾಡಿದ್ದಾಾರೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆೆಸ್ ನಾಯಕರನ್ನು ಪಕ್ಷದತ್ತ ಸೆಳೆಯಲು ಮಾಸ್ಟರ್ ಪ್ಲಾಾನ್ ರೂಪಿಸುತ್ತಿಿದ್ದಾಾರೆ.

15 ಕ್ಷೇತ್ರಗಳಲ್ಲಿ ಎಚ್‌ಡಿಕೆಗೆ ‘ಪಂಚ’ತಂತ್ರ
ಮಾಜಿ ಮುಖ್ಯಮಂತ್ರಿಿ ಎಚ್.ಡಿ.ಕುಮಾರಸ್ವಾಾಮಿ ಅನರ್ಹರ ಪೈಕಿ 5 ಮಂದಿಯನ್ನು ಸೋಲಿಸಲೇಬೇಕೆಂದು ಹಟಕ್ಕೆೆ ಬಿದ್ದಿದ್ದಾರೆ. ತಮಗೆ ಕೈ ಕೊಟ್ಟು ಅನರ್ಹರಾದ ತಮ್ಮದೇ ಪಕ್ಷದವರಾಗಿದ್ದ ವಿಶ್ವನಾಥ, ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರು ಕುಮಾರಸ್ವಾಾಮಿ ಅವರ ಮೊದಲ ಟಾರ್ಗೆಟ್ ಆಗಿದ್ದಾಾರೆ. ಜೆಡಿಎಸ್ ವಿರುದ್ಧ ಕಿಡಿಕಾರುತ್ತಿಿದ್ದ ಎಂಟಿಬಿ ನಾಗರಾಜ್ ಮತ್ತು ಸುಧಾಕರ್ ವಿರುದ್ಧವೂ ಅಸಮಾಧಾನವಿದ್ದು, ಇವರನ್ನು ಸಹ ಗುರಿಯಾಗಿಸಿಕೊಂಡಿದ್ದಾಾರೆ. ಸದ್ಯಕ್ಕೆೆ 15 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಪರೋಕ್ಷವಾಗಿ ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ಸೂಚಿಸಲಾಗಿದೆ. ಉಳಿದ 10 ಕ್ಷೇತ್ರಗಳಿಗೂ ಇವರಿಗೆ ಆಟಕ್ಕುಂಟು ಲೆಕ್ಕಕ್ಕಿಿಲ್ಲ. ಏಕೆಂದರೆ ಅಲ್ಲಿ ಬಿಜೆಪಿ-ಕಾಂಗ್ರೆೆಸ್ ತೀವ್ರ ಪೈಪೋಟಿ ಇರುವ ಕಾರಣದಿಂದ ಜೆಡಿಎಸ್ ಗೆಲುವು ಸುಲಭವಲ್ಲ ಎಂಬ ಲೆಕ್ಕಾಾಚಾರ ಎಚ್‌ಡಿಕೆಯದ್ದು.

error: Content is protected !!