Friday, 27th May 2022

ನಕಲಿ ದಾಳಿ: ನಾಲ್ವರು ಸಿಬಿಐ ಅಧಿಕಾರಿಗಳ ಬಂಧನ

ನವದೆಹಲಿ: ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ದಾಳಿ ನಡೆಸಿದ್ದ ನಾಲ್ವರು ಸಿಬಿಐ ಅಧಿಕಾರಿಗಳನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ.

ಚಂಡೀಗಢಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಾಗದೆ ಇದ್ದರೂ ಅಥವಾ ಹಿರಿಯ ಅಧಿಕಾರಿಗಳ ಆದೇಶ ಇಲ್ಲದೆ ಇದ್ದರೂ ಶೋಧ ಕಾರ್ಯಾ ಚರಣೆಗೆ ಮುಂದಾಗಿದ್ದರು.

ಸಿಬಿಐ ಅಧಿಕಾರಿಗಳ ವರ್ತನೆ ಕಂಡು ಅನುಮಾನಗೊಂಡ ದಾಳಿಗೆ ಒಳಗಾದವರು ಅವರನ್ನು ಕೂಡಿ ಹಾಕಿ ಪೊಲೀಸರಿಗೆ ಕರೆ ಮಾಡಿದ್ದರು.

ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳು ನಕಲಿ ದಾಳಿ ನಡೆಸಿ ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದು ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಸಿಬಿಐ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸ ಲಾಗುವುದು ಎಂದು ಕೇಂದ್ರೀಯ ತನಿಖಾ ಸಂಸ್ಥೆ ಸ್ಪಷ್ಟ ಪಡಿಸಿದೆ.