Tuesday, 26th October 2021

ಕೋಟಿಗೊಬ್ಬ-3 ಚಿತ್ರ ಬಿಡುಗಡೆ ರದ್ದು: ಅಭಿಮಾನಿಗಳ ಆಕ್ರೋಶ

ಬೆಳಗಾವಿ: ಇಂದು ಬಿಡುಗಡೆಯಾಗಬೇಕಿದ್ದ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗದ ಕಾರಣ, ಟಿಕೆಟ್ ಪಡೆದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಹೀಗಾಗಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ರೊಚ್ಚಿಗೆದ್ದ ನಟ ಸುದೀಪ್ ಅಭಿಮಾನಿಗಳು, ಕೋಟಿಗೊಬ್ಬ-3 ಪ್ಲೆಕ್ಸ್ ಹರಿದಿದ್ದಲ್ಲದೇ, ಚಿತ್ರಮಂದಿರಗಳ ಮೇಲೂ ಕಲ್ಲು ತೂರಾಟ ನಡೆಸಿಸಿದ್ದಾರೆ. ವಿಜಯಪುರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರಕ್ಕೆ ನಟ ಸುದೀಪ್ ಅಭಿಮಾನಿಗಳ ದಂಡೇ ಆಗಮಿಸಿತ್ತು.

ಕೋಟಿಗೊಬ್ಬ-3 ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ ಟಿಕೆಟ್ ಕೂಡ ನೀಡಲಾಗಿತ್ತು. ಆದರೆ ಕೋಟಿಗೊಬ್ಬ-3 ಚಿತ್ರ ಮಾತ್ರ ಬಿಡುಗಡೆಯಾಗಲಿಲ್ಲ. ಇದರಿಂದ ಆಕ್ರೋಶಗೊಂಡ ನಟ ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ದಾಂಧಲೆ ನಡೆಸಿದರು.

ಚಿತ್ರಮಂದಿರಗಳ ಮುಂದೆ ಹಾಕಿದ್ದಂತ ಫ್ಲೆಕ್ಸ್ ಹರಿದು ಹಾಕಿದ್ದಲ್ಲದೇ, ಕೋಟಿಗೊಬ್ಬ-3 ಚಿತ್ರ ಬಿಡುಗಡೆ ಆಗದೇ ಇದ್ದರಿಂದಾಗಿ ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ಕೂಡ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ದಾಂಧಲೆ ನಡೆಸುತ್ತಿದ್ದ ಅಭಿಮಾನಿಗಳನ್ನು ಹತೋಟಿಗೆ ತರುವ ಸಲುವಾಗಿ ಲಾಠಿ ಚಾರ್ಜ್ ಕೂಡ ಮಾಡಬೇಕಾಯಿತು. ಈ ಮೂಲಕ ಪರಿಸ್ಥಿತಿ ಹತೋಟಿಗೆ ತರೋ ಕೆಲಸವನ್ನು ಕೂಡ ಮಾಡಿದರು.

Leave a Reply

Your email address will not be published. Required fields are marked *