Wednesday, 11th December 2024

Festive season Mens fashion: ಫೆಸ್ಟಿವ್‌ ಸೀಸನ್‌ ಮೆನ್ಸ್ ಫ್ಯಾಷನ್‌‌‌ಗೆ ಎಂಟ್ರಿ ಕೊಟ್ಟ ಮಿರರ್‌ ಕುರ್ತಾ!

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬದ ಸಂಭ್ರಮ ಹೆಚ್ಚಿಸಲು ಯುವಕರಿಗೆ ಗ್ರ್ಯಾಂಡ್‌ ಲುಕ್‌ ನೀಡುವ ಮಿರರ್‌ ಕುರ್ತಾಗಳು ಮೆನ್ಸ್ ಫ್ಯಾಷನ್‌ಲೋಕಕ್ಕೆ (Festive season Mens fashion) ಎಂಟ್ರಿ ನೀಡಿವೆ.

ಹೌದು, ಈ ಬಾರಿಯ ಫೆಸ್ಟಿವ್‌ ಸೀಸನ್‌ ಮೆನ್ಸ್ ಫ್ಯಾಷನ್‌ನಲ್ಲಿ, ಇದೀಗ ಹಬ್ಬದ ಸಂಭ್ರಮವನ್ನು ಹೆಚ್ಚಿಸುವಂತಹ ಅತ್ಯಾಕರ್ಷಕವಾದ ನಾನಾ ಬಗೆಯ ಮಿರರ್‌ ಕುರ್ತಾಗಳು ಎಂಟ್ರಿ ನೀಡಿದ್ದು, ಒಂದಕ್ಕಿಂತ ಒಂದು ಡಿಸೈನ್‌ನ ಕುರ್ತಾಗಳು ಯುವಕರನ್ನು ಸೆಳೆಯುತ್ತಿವೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಜ್ಜಾಗಿವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ ಆಕರ್ಷ್‌ ರಜಪೂತ್‌.

ಟ್ರೆಂಡ್‌ನಲ್ಲಿ ಮಿರರ್‌ ಕುರ್ತಾ ಫ್ಯಾಷನ್‌
ಹೆಸರೇ ಹೇಳುವಂತೆ ಮಿರರ್‌ನಿಂದ ಡಿಸೈನ್‌ಗೊಂಡಂತಹ ಕುರ್ತಾಗಳನ್ನು ಮಿರರ್‌ ಕುರ್ತಾ ಎನ್ನಲಾಗುತ್ತದೆ. ಹಾಗೆಂದು, ಮೆನ್ಸ್‌ ಕುರ್ತಾಗಳಲ್ಲಿ ಅತಿ ಹೆಚ್ಚಾಗಿ ಮಿರರ್‌ ಡಿಸೈನ್‌ ಇರುವುದಿಲ್ಲ. ನೆಕ್‌ಲೈನ್‌ಗಳಲ್ಲಿ ಅತಿ ಹೆಚ್ಚಾಗಿ ಕಾಣಬಹುದು. ಈ ಹಿಂದೆ ಯುವತಿಯರ ಮಿರರ್‌ ಕುರ್ತಾಗಳು ಫ್ಯಾಷನ್‌ನಲ್ಲಿದ್ದವು. ಈ ಬಾರಿ ಮೆನ್ಸ್ ಮಿರರ್‌ ಕುರ್ತಾಗಳು ಟ್ರೆಂಡಿಯಾಗಿವೆ. ಅದರಲ್ಲೂ ಹಬ್ಬದ ಸಂಭ್ರಮ ಹೆಚ್ಚಿಸುವಂತಹ ಸನ್‌ ಕಲರ್‌, ಪೀಚ್‌, ಪಿಸ್ತಾ ಶೇಡ್‌ನಂತಹ ಪಾಸ್ಟೆಲ್‌ ಶೇಡ್‌ನಲ್ಲಿ ಇವು ಬಿಡುಗಡೆಗೊಂಡಿವೆ. ಇನ್ನು ಕಾಲರ್‌ ಹಾಗೂ ನೆಕ್‌ ಲೈನ್‌ ಸುತ್ತಲೂ ಮಿರರ್‌ ಡಿಸೈನ್‌ ಇರುವಂತಹ ಕುರ್ತಾಗಳು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ಮಾಡೆಲ್‌ ವಿನಯ್‌ ಸಿಂಧ್ಯಾ.

ಅವರ ಪ್ರಕಾರ, ಡಿಸೈನರ್‌ ಮಿರರ್‌ ಕುರ್ತಾಗಳು ಸಾಮಾನ್ಯರಿಗೂ ಸೆಲೆಬ್ರೆಟಿ ಲುಕ್‌ ನೀಡುತ್ತವಂತೆ. ಅಲ್ಲದೇ, ಈ ಫೆಸ್ಟಿವ್‌ ಸೀಸನ್‌ಗೆ ಹುಡುಗರಿಗೆ ಹೇಳಿಮಾಡಿಸಿದಂತಿವೆ ಎನ್ನುತ್ತಾರೆ. ಇನ್ನು, ಹುಡುಗರು ಈ ಮಿರರ್‌ ಕುರ್ತಾದಲ್ಲಿ ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆಯೂ ವಿನಯ್‌ ಸಿಂಧ್ಯಾ ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ನೀಡಿದ್ದಾರೆ.

ಪರ್ಸನಾಲಿಟಿಗೆ ತಕ್ಕಂತಿರಲಿ ಮಿರರ್‌ ಕುರ್ತಾ ಆಯ್ಕೆ
ಯುವಕರು ತಮ್ಮ ಪರ್ಸನಾಲಿಟಿಗೆ ತಕ್ಕಂತೆ ಮಿರರ್‌ ಕುರ್ತಾ ಡಿಸೈನ್‌ ಆಯ್ಕೆ ಮಾಡಿಕೊಳ್ಳಬೇಕು. ಕಂಪ್ಲೀಟ್‌ ಮಿರರ್‌ ಡಿಸೈನ್‌ ಇರುವುದನ್ನು ಆಯ್ಕೆ ಮಾಡುವ ಬದಲು ಸಿಂಪಲ್‌ ನೆಕ್‌ ವಿನ್ಯಾಸಕ್ಕೆ ಆದ್ಯತೆ ನೀಡಬೇಕು

ಮಿರರ್‌ ಕುರ್ತಾಗೆ ಸಿಂಪಲ್‌ ಮೇಕೋವರ್‌ ಇರಲಿ
ಮಿರರ್‌ ಕುರ್ತಾ ಧರಿಸುವ ಯುವಕರು ಆದಷ್ಟೂ ಟ್ರೆಡಿಷನಲ್‌ ಲುಕ್‌ ನೀಡುವ ಮೇಕೋವರ್‌ಗೆ ಸೈ ಎನ್ನಬೇಕು. ಜಂಕ್‌ ಆಕ್ಸೆಸರೀಸ್‌ ಧರಿಸಬಾರದು.

ಸ್ಕಿನ್‌ಟೋನ್‌ಗೆ ತಕ್ಕ ಕಲರ್‌ ಆಯ್ಕೆ
ಯಾವುದೇ ಗ್ರ್ಯಾಂಡ್‌ ಮಿರರ್‌ ಕುರ್ತಾ ಖರೀದಿಸುವಾಗ ಆದಷ್ಟೂ ನಿಮ್ಮ ಮುಖದ ಬಣ್ಣಕ್ಕೆ ಹೊಂದುವಂತಹ ಫ್ಯಾಬ್ರಿಕ್‌ ಹಾಗೂ ಕಲರ್‌ ಸೆಲೆಕ್ಟ್‌ಮಾಡಬೇಕು. ಆಗಷ್ಟೇ ಅದು ನೀವು ಧರಿಸಿದಾಗ ಆಕರ್ಷಕವಾಗಿ ಕಾಣಿಸುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)