ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಕಾಂತಾರ ಬೆಡಗಿಯ ನಯಾ ಕೂಲ್‌ ಲುಕ್‌ಗೆ ಅಭಿಮಾನಿಗಳು ಫಿದಾ!

Star Fashion 2025: ತೆಲುಗು ಸಿನಿಮಾವೊಂದರ ಬಿಡುಗಡೆ ಖುಷಿಯಲ್ಲಿರುವ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡರ ನಯಾ ಕೂಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದ್ಯಾವ ಬಗೆಯ ಲುಕ್‌? ಹೇಗೆ ಕಾಣಿಸುತ್ತಿದ್ದಾರೆ? ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

ಚಿತ್ರಗಳು: ಸಪ್ತಮಿ ಗೌಡ, ಸ್ಯಾಂಡಲ್‌ವುಡ್‌ ನಟಿ., ಫೋಟೋಗ್ರಾಫಿ: ಮಾಯಾರ್ಥ ಪ್ರೊಡಕ್ಷನ್‌
1/5

ಕಾಂತಾರಾ ಬೆಡಗಿ ನಟಿ ಸಪ್ತಮಿ ಗೌಡ ನ್ಯೂ ಕೂಲ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ಸದ್ಯ ಮುಂಬರುವ ತಿಂಗಳಲ್ಲಿ ಬಿಡುಗಡೆಯಾಗಲಿರುವ ತೆಲುಗು ಸಿನಿಮಾವೊಂದರ ಬಿಡುಗಡೆಯ ಖುಷಿಯಲ್ಲಿರುವ ನಟಿ ಸಪ್ತಮಿ ಗೌಡ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದು, ಇವರ ಈ ಹೊಸ ಲುಕ್‌ಗೆ ಫಾಲೋವರ್ಸ್ ಫಿದಾ ಆಗಿದ್ದಾರೆ.

2/5

ಸಪ್ತಮಿ ಗೌಡ ನಯಾ ಲುಕ್‌

ಅಂದಹಾಗೆ, ಸಪ್ತಮಿ ಗೌಡ ಆಗಾಗ್ಗೆ ಬಗೆಬಗೆಯ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಎಥ್ನಿಕ್‌, ಇನ್ನು ಕೆಲವೊಮ್ಮೆ ಸೀರೆಯಲ್ಲಿ, ಮತ್ತೊಮ್ಮೆ ಕ್ಯಾಶುವಲ್‌ನಲ್ಲಿ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿ ಬಳಗವನ್ನು ಆಕರ್ಷಿಸುತ್ತಿರುತ್ತಾರೆ.

3/5

ಮೂಗುತಿ ತೆಗೆದು ಬದಲಾದ ಸಪ್ತಮಿ ಗೌಡ

ಕಾಂತಾರಾ ಸಿನಿಮಾದ ನಂತರ ಮೂಗುತಿ ತೆಗೆದ ಸಪ್ತಮಿ ಗೌಡ, ಆಯಾ ಪಾತ್ರಕ್ಕೆ ತಕ್ಕಂತೆ ಬದಲಾಗಿದ್ದಾರೆ. ಅಲ್ಲದೇ, ಅವರ ಲುಕ್‌ನಲ್ಲೂ ಬದಲಾವಣೆ ತಂದಿದ್ದಾರೆ. ಇನ್ನು, ಫಿಟ್ನೆಸ್‌ ವಿಷಯಕ್ಕೆ ಬಂದಲ್ಲಿ, ಮೊದಲಿಗಿಂತ ತೀರಾ ಸ್ಲಿಮ್‌ ಆಗಿದ್ದಾರೆ. ಇದು ಅವರನ್ನು ಮತ್ತಷ್ಟು ಯಂಗ್‌ ಆಗಿ ಬಿಂಬಿಸುತ್ತಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಸಪ್ತಮಿ ಗೌಡ ಕೂಲ್ ಲುಕ್‌ ವಿಶೇಷತೆ

ಇದೀಗ ಕಾಣಿಸಿಕೊಂಡಿರುವ ಸಪ್ತಮಿ ಗೌಡರ ಕೂಲ್‌ ಲುಕ್‌ ಕಂಪ್ಲೀಟ್‌ ವೆಸ್ಟರ್ನ್‌ ಲುಕ್‌ ಹೊಂದಿದೆ. ನೂಡಲ್‌ ಸ್ಟ್ರಾಪ್‌ನ ವೈಟ್‌ ಡಿಸೈನರ್‌ ಬಾಡಿಕಾನ್‌ ಟಾಪ್‌ಗೆ ಸ್ಟ್ರೈಟ್‌ ಕಟ್‌ ನ್ಯಾರೋ ರೆಡ್‌ ಪ್ಯಾಂಟ್‌ ಧರಿಸಿದ್ದಾರೆ. ಇದು ಕ್ಯಾಶುವಲ್‌ ಲುಕ್‌ ಜತೆಜತೆಗೆ ಅವರನ್ನು ಕಾಲೇಜು ಹುಡುಗಿಯಂತೆ ಬಿಂಬಿಸಿದೆ. ಇನ್ನು ಅವರು ಧರಿಸಿರುವ ಆಕ್ಸೆಸರೀಸ್‌ಗಳು ಅವರನ್ನು ಮತ್ತಷ್ಟು ಹೈಲೈಟ್‌ ಮಾಡಿದೆ. ವುಡನ್‌ನ ಎರಡೆರಡು ಬ್ಯಾಂಗಲ್‌ಗಳು, ಕ್ರಿಸ್ಟಲ್‌ ಪೆಂಡೆಂಟ್‌ನ ಚೈನ್‌, ಬೆರಳಿನ ಉಂಗುರಗಳು, ಬೆಲ್ಟ್ ವಾಚ್‌ ಹಾಗೂ ಗೋಳ್ಡ್‌ ಶೇಡ್‌ ರೆಡ್‌ ಮಿಕ್ಸ್ ಇಯರಿಂಗ್‌ ಈ ಲುಕ್‌ಗೆ ಸಾಥ್‌ ನೀಡಿದೆ. ಸನ್‌ಗ್ಲಾಸ್‌ ಮತ್ತಷ್ಟು ಹೈ ಫ್ಯಾಷನ್‌ ಟಚ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಒಟ್ಟಾರೆ, ಸಪ್ತಮಿಯ ಈ ಕೂಲ್‌ ಲುಕ್‌ ಸದ್ಯ ಫ್ಯಾಷನ್‌ ಪ್ರೇಮಿಗಳನ್ನು ಸೆಳೆದಿದೆ ಎನ್ನುತ್ತಾರೆ.

ಶೀಲಾ ಸಿ ಶೆಟ್ಟಿ

View all posts by this author