Sunday, 14th August 2022

ಪರಿಸರ ಮಾಲಿನ್ಯ ಮಾಡಿದ್ದಕ್ಕೆ ದಂಡ

ರವಿ ದುಡ್ಡಿನಜಡ್ಡು

ಜೀಪ್ ಎಂಬ ಬ್ರಾಂಡ್ ಹೆಸರಿನ ಕಾರುಗಳು ಈಚಿನ ವರ್ಷದಲ್ಲಿ ನಮ್ಮ ದೇಶದಲ್ಲಿ ಜನಪ್ರಿಯತೆ ಗಳಿಸಿದ್ದು ನಿಮ್ಮ ಗಮನಕ್ಕೂ ಬಂದಿರಬಹುದು. ಸಾಕಷ್ಟು ಕಾರ್ಯಕ್ಷಮತೆ ಹೊಂದಿರುವ ಈ ವಾಹನವನ್ನು ಈಗ ಅಮೆರಿಕದಲ್ಲಿ ತಯಾರಿಸುತ್ತಿರುವುದು ಸ್ಟೆಲ್ಲಾಂಟಿಸ್ ಎಂಬ ಸಂಸ್ಥೆ. ಜೀಪ್ ಜತೆಗೆ, ಡಾಡ್ಜ್ ಎಂಬ ವಾಹನವನ್ನೂ ಇದು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸಾಕಷ್ಟು ಪ್ರತಿಷ್ಠಿತ ಎನಿಸಿರುವ, ಜಗತ್ತಿನ ಐದನೆಯ ಅತಿ ದೊಡ್ಡ ಆಟೊಮೊಬೈಲ್ ಸಂಸ್ಥೆಯಾದ ಸ್ಟೆಲ್ಲಾಂಟಿಸ್, ಉದ್ದೇಶ ಪೂರ್ವಕ ತಪ್ಪು ಮಾಡಿ, ಈಗ ಭಾರಿ ಮೊತ್ತದ ದಂಡವನ್ನು ಪಾವತಿ ಮಾಡಲು ಒಪ್ಪಿಕೊಂಡಿದೆ. ಅಮೆರಿಕದ ನಿಯಂತ್ರಣಾ ಪ್ರಾಧಿ ಕಾರವು ಹೊರಿಸಿದ ಆರೋಪದ ಪ್ರಕಾರ, ಸ್ಟೆಲ್ಲಾಂಟಿಸ್ ಸಂಸ್ಥೆಯು ‘ಉದ್ದೇಶಪೂರ್ವಕ’ ವಾಗಿ, ವಾಯು ಮಾಲಿನ್ಯವನ್ನು ಮುಚ್ಚಿಡುವಂತಹ ಸಾಫ್ಟ್ ವೇರ್ ತಯಾರಿಸಿ, ತನ್ನ ವಾಹನಗಳು ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತವೆ ಎಂದು ಅಮೆರಿಕದ ಸರಕಾರ ವನ್ನು ಯಾಮಾರಿಸಿತ್ತು.

ಟೆಸ್ಟ್ ಮಾಡುವಾಗ ಅಮೆರಿಕದ ವಾಯುಮಾಲಿನ್ಯ ಮಿತಿಗೆ ಅನುಸಾರವಾಗಿ ತನ್ನ ವಾಹನ ಗಳು ಡೀಸೆಲ್‌ನ್ನು ಬಳಸಿ, ಚಲಿಸುತ್ತವೆ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ, ಸರಕಾರದ ಇಲಾಖೆಗಳು ನಡೆಸುವ ಎಮಿಷನ್ ಟೆಸ್ಟ್‌ಗಳ ಕಣ್‌ತಪ್ಪಿಸಲು ಈ ಸಂಸ್ಥೆಯು ಅಳವಡಿಸಿದ್ದ ಅನಧಿಕೃತ ಸಾಫ್ಟ್ ವೇರ್‌ನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿ, ಸ್ಟೆಲ್ಲಾಂಟಿಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರು. ಈಗ ಸಂಸ್ಥೆಯು ತಪ್ಪಿತಸ್ಥ ಎಂದು ನಿರ್ಣಯ ಹೊರಬಂದಿದ್ದು, ೩೦೦ ಮಿಲಿಯ ಡಾಲರ್ (ಸುಮಾರು 23 ಬಿಲಿಯ ರುಪಾಯಿ) ದಂಡವನ್ನು ಸಂಸ್ಥೆಯು ಪಾವತಿಸಬೇಕಾಗಿದೆ.

ಡೀಸೆಲ್ ಬಳಸಿ ಚಲಿಸುವ ವಾಹನಗಳು ಹೊರಸೂಸುವ ಮಾಲಿನ್ಯದ ಪ್ರಮಾಣ ವನ್ನು ಮುಚ್ಚಿಡಲು ಆ ಸಂಸ್ಥೆ ಪ್ರಯತ್ನಿಸಿದ್ದು ಕೋರ್ಟ್‌ನಲ್ಲಿ ಋಜುವಾ ತಾಗಿದೆ. 2014 ಮತ್ತು 2016ರ ಅವಧಿಯಲ್ಲಿ ಮಾರಾಟವಾದ ಎಸ್‌ಯುವಿ, ಪಿಕ್ ಅಪ್ ಟ್ರಕ್ ಮತ್ತು ಕಾರುಗಳ ಸಂಬಂಧ ಈ ದಂಡವನ್ನು ಸಂಸ್ಥೆ ಪಾವತಿಸಲಿದೆ. ಜತೆಗೆ, ಮುಂದಿನ ವರ್ಷಗಳಲ್ಲಿ ಕ್ಲೀನ್ ಏರ್ ಕಾನೂನನ್ನು ಪಾಲಿಸುವ ಬದ್ಧತೆ ಯನ್ನೂ ಕಂಪೆನಿ ಒಪ್ಪಿಕೊಂಡಿದೆ. ಉದ್ದೇಶಪೂರ್ವಕವಾಗಿ ವಾಯು ಮಾಲಿನ್ಯ ತಪಾಸಣೆಯಲ್ಲಿ ಮೋಸ ಮಾಡಿದ್ದಕ್ಕಾಗಿ, ಸ್ಟೆಲ್ಲಾಂಟಿಸ್ ಸಂಸ್ಥೆಯು ಮೂವರು ಉದ್ಯೋಗಿಗಳ ಮೇಲೆ ಕ್ರಿಮಿನಲ್ ಚಾರ್ಜ್‌ಗಳನ್ನು ಸಹ ಅಲ್ಲಿನ ಸರಕಾರ ಹೊರಿಸಿದೆ.

ಈ ಹಿಂದೆ ವೋಕ್ಸ್‌ವೇಗನ್ ಸಂಸ್ಥೆಯು ಇಂತಹದೇ ಮೋಸ ಮಾಡಿದ್ದು, ಸುಮಾರು 20 ಬಿಲಿಯ ಡಾಲರ್ ದಂಡವನ್ನು ಪಾವತಿ ಸಿತ್ತು! ಪರಿಸರ ರಕ್ಷಣೆ ಎಂದು ಎಲ್ಲರೂ ಬೊಬ್ಬೆ ಹೊಡೆಯುತ್ತಿರುವಾಗಲೇ, ಪ್ರಖ್ಯಾತ ಸಂಸ್ಥೆಗಳು ತಮ್ಮ ವಾಹನಗಳು ಹೊರ ಸೂಸುವ ಮಾಲಿನ್ಯವನ್ನು ಮುಚ್ಚಿಟ್ಟು, ವಾಹನಗಳನ್ನು ಮಾರಾಟಮಾಡುವ ಮೂಲಕ ಇನ್ನಷ್ಟು ಪರಿಸರ ಮಾಲಿನ್ಯವನ್ನು ಈ ಜಗತ್ತಿನ ವಾತಾವರಣಕ್ಕೆ ಸೇರಿಸಿದ್ದು ವಿಪರ್ಯಾಸ.

ಸ್ವಯಂಚಾಲಿತ ಹಡಗು!
ಸ್ವಯಂಚಾಲಿತ ಮತ್ತು ಚಾಲಕ ರಹಿತ ಕಾರುಗಳ ಕುರಿತು ಸಾಕಷ್ಟು ಕೇಳುತ್ತಿ ದ್ದೇವೆ. ಈಗ ಸ್ವಯಂಚಾಲಿತ ಹಡಗೊಂದು ಸಾವಿ ರಾರು ಮೈಲಿ ಸಂಚರಿಸುವ ಗುರಿ ಹೊಂದಿದ್ದು, ಸಮುದ್ರದಲ್ಲಿ ತನ್ನ ಪಯಣ ಆರಂಭಿಸಿ, ದಾಖಲೆ ಬರೆದಿದೆ. ಬೃಹತ್ ಗಾತ್ರದ ಹಡಗುಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು ಯಶಸ್ವಿ ಯಾಗಿ ಅಳವಡಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹುಂಡಾಯ್ ಸಂಸ್ಥೆಯ ಸಹವರ್ತಿ ಸಂಸ್ಥೆಯಾಗಿರುವ ಅವಿಕಸ್ ಹೇಳಿದೆ.

ಗಲ್ಫ್ ಆಫ್ ಮೆಕ್ಸಿಕೋದ ಫ್ರೀ ಪೋರ್ಟ್‌ನಿಂದ ಮೇ 1 ರಂದು ಹೊರಟ ‘ದಿ ಪ್ರಿಸಂ ಕರೇಜ್’ ಎಂಬ ಹೆಸರಿನ ಹಡಗು, ಅವಿಕಸ್‌ನ ಕೃತಕ ಬುದ್ಧಿಮತ್ತೆಯ ಸಾಫ್ಟ್ ವೇರ್ ಹಿನಾಸ್ 2.0 ಬಳಸಿ, ತನ್ನ ಪಯಣವನ್ನು ಆರಂಭಿಸಿದ್ದು, 12427 ಮೈಲಿ ಕ್ರಮಿಸಿ ದಕ್ಷಿಣ ಕೊರಿಯಾವನ್ನು ತಲುಪಲಿದೆ. ಸಮುದ್ರದಲ್ಲಿ ತನ್ನ ಪಥದಲ್ಲಿ ಎದುರಾಗಲಿರುವ ಇತರ ಹಡಗುಗಳು, ವಾತಾವರಣದ ತೊಡಕು ಗಳು ಮತ್ತು ಬದಲಾಗುವ ಸಮುದ್ರದ ಅಲೆಗಳನ್ನು ನಿಖರವಾಗಿ ಲೆಕ್ಕಹಾಕಿ, ಮುಂದೆ ಸಾಗುವ ಸಾಮರ್ಥ್ಯವನ್ನು ‘ದಿ ಪ್ರಿಸಂ ಕರೇಜ್’ ಹೊಂದಿದೆ. ಆದರೆ, ಬೃಹತ್ ಗಾತ್ರದ ಈ ಹಡಗು ಸಂಪೂರ್ಣ ಚಾಲಕ ರಹಿತ ಎನ್ನಲಾಗುವುದಿಲ್ಲ.

ದಾರಿಯ ಮಧ್ಯದಲ್ಲಿ ಆಗಾಗ ಭೇಟಿ ಕೊಡಬೇಕಾಗುವ ಬಂದರುಗಳಿಗೆ ಹೋಗುವುದು, ಅಲ್ಲಿ ಲಂಗರು ಹಾಕುವುದು, ಬಂದರು ಸನಿಹದ ಕಿಕ್ಕಿರಿದ ಪಥದಲ್ಲಿ ಸಂಚರಿಸುವುದು ಮೊದಲಾದ ಕ್ಲಿಷ್ಟ ಕೆಲಸಗಳನ್ನು ನೋಡಿಕೊಳ್ಳಲು ಹಡಗಿನ ಸಿಬ್ಬಂದಿ ಇದ್ದಾರೆ. ಆದರೆ, ಆ ಹಡಗಿನಲ್ಲಿರುವ ಕೃತಕ ಬುದ್ಧಿಮತ್ತೆ ಆಧರಿತ ಸಾಫ್ಟ್ ವೇರ್‌ನ ಕಾರ್ಯಕ್ಷಮತೆಯಿಂದಾಗಿ, ಒಟ್ಟು ಸಂಚರಿಸುವ ದೂರವು ಶೇ.೭ರಷ್ಟು ಕಡಿಮೆಯಾಗಲಿದ್ದು, ಇದರಿಂದಾಗಿ ಸಾಕಷ್ಟು ಇಂಧನ ಉಳಿತಾಯವಾಗಲಿದೆ.

ಇಂತಹ ಪಯಣಗಳ ದೂರಗಾಮಿ ಪರಿಣಾಮಗಳಲ್ಲಿ ಒಂದೆಂದರೆ, ಅಷ್ಟರ ಮಟ್ಟಿಗೆ ಪರಿಸರ ಮಾಲಿನ್ಯ ಕಡಿಮೆ ಮಾಡುವುದು (ಕಡಿಮೆ ಇಂಧನ ಬಳಕೆಯ ಮೂಲಕ). ಈಗ ಬೃಹತ್ ವಾಣಿಜ್ಯ ಹಡಗುಗಳಿಗೆ ಈ ಸ್ವಯಂಚಾಲನೆಯ ಸಾಫ್ಟ್ ವೇರ್‌ನ್ನು ನೀಡಲಿ ರುವ ಅವಿಕಸ್ ಸಂಸ್ಥೆಯು, ಮುಂದಿನ ದಿನಗಳಲ್ಲಿ ಸಣ್ಣ ಹಡಗುಗಳಿಗೂ ಇದನ್ನು ಒದಗಿಸಲಿದೆ. ಅಷ್ಟರಲ್ಲಿ ಸಾಫ್ಟ್ ವೇರ್‌ನ ಕಾರ್ಯ ಕ್ಷಮತೆಯು ಇನ್ನಷ್ಟು ಸುಧಾರಣೆಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ದೋಣಿಗಳು, ಕ್ರುಯಿಸ್‌ಗಳು
ಬಹು ಮಟ್ಟಿಗೆ ಚಾಲಕರಹಿತವಾದರೆ ಅಚ್ಚರಿಯಿಲ್ಲ!

ಸುದ್ದಿಯಲ್ಲಿ ಟಾಟಾ ಸಂಸ್ಥೆಯ ಇ.ವಿ. ಟಾಟಾ ಸಂಸ್ಥೆಯು ಸುಮಾರು 10000 ‘ಎಕ್ಸ್‌ಪ್ರೆಸ್’ ಬ್ರ್ಯಾಂಡ್‌ನ ವಿದ್ಯುತ್ ಚಾಲಿತ ಕಾರು ಗಳನ್ನು (ಇ.ವಿ.) ಸರಬರಾಜು ಮಾಡುವ ಗುತ್ತಿಗೆಯನ್ನು ಪಡೆದಿದೆ. ವಿದ್ಯುತ್ ಚಾಲಿತ ವಾಹನಗಳ ವಿಚಾರದಲ್ಲಿ ಸದ್ಯಕ್ಕೆ ಇದೊಂದು ದಾಖಲೆ. ಒಂದೇ ಕಂತಿನಲ್ಲಿ 10000 ಕಾರುಗಳನ್ನು ಸರಬರಾಜು ಮಾಡಲು ಟಾಟಾ ಸಂಸ್ಥೆಯ ಜತೆ ಬಲುಸ್ಮಾಟ್
ಎಲೆಕ್ಟ್ರಿಕ್ ಮೊಬಿಲಿಟಿ ಕೈಜೋಡಿಸಲಿದೆ.

ಟಾಟಾ ಸಂಸ್ಥೆಯು ಸರಬರಾಜು ಮಾಡಲಿರುವ ಎಕ್ಸ್ ಪ್ರೆಸ್-ಟಿ ಬ್ರಾಂಡ್‌ನ ವಾಹನಗಳು ಸೆಡಾನ್ ಕಾರುಗಳಾಗಿದ್ದು ಇವುಗಳಲ್ಲಿ ಎರಡು ಮಾದರಿಗಳಿವೆ. ಈ ಮಾದರಿಗಳು ಒಮ್ಮೆ ಚಾಜ್ ಮಾಡಿದರೆ 213 ಕಿಮೀ ಮತ್ತು 165 ಕಿಮೀ ಚಲಿಸಬಲ್ಲವು. ಈ ವಾಹನ ಗಳಲ್ಲಿ ಬಳಸಲಾಗುತ್ತಿರುವ ಬ್ಯಾಟರಿಗಳು 90 ನಿಮಿಷ ಮತ್ತು 100 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಬಲ್ಲವು. ಈ ವಾಹನ ಗಳು ಜೀರೋ ಟೇಲ್ ಪೈಪ್ ಎಮಿಷನ್, ಸಿಂಗಲ್ ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್, ಡ್ಯುಎಲ್ ಏರ್‌ಬ್ಯಾಗ್
ಮೊದಲಾದ ಸೌಲಭ್ಯ ಹೊಂದಿವೆ.