Tuesday, 17th May 2022

ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆಯನ್ನು ಖಾಲಿ ಪತ್ರಕ್ಕೆ ಒತ್ತಿಸಿಕೊಂಡರು…ವಿಡಿಯೋ ವೈರಲ್‌

ಮೈಸೂರು: ಆಕೆಯ ಸಂಬಂಧಿಕರೇ ಖಾಲಿ ಪತ್ರಕ್ಕೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೈಸೂರಿನ ಶ್ರೀರಾಂಪುರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಮೃತ ವೃದ್ದೆ ಆಸ್ತಿ ಹೊಂದಿದ್ದು, ಅದನ್ನು ಪಡೆಯುವ ಸಲುವಾಗಿ ಆಕೆಯ ಸಂಬಂಧಿ ಕರು ಖಾಲಿ ಪತ್ರಗಳಿಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ. ಈ ಸನ್ನಿವೇಶವನ್ನು ಮಹಿಳೆಯೊಬ್ಬರು ಪ್ರಶ್ನಿಸುತ್ತಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಹೆಬ್ಬೆಟ್ಟಿನ ಗುರು ತಿರುವ ಪತ್ರಗಳನ್ನ ಪಡೆಯಲು ಮಹಿಳೆ ಯತ್ನಿಸಿದ್ದಾರೆ. ಆದರೆ ಇದಕ್ಕೆ ಸ್ಪಂದಿಸದ ಸಂಬಂಧಿಕರು ಖಾಲಿ ಪತ್ರಗಳನ್ನು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆಯ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತು ಪಡೆಯುವುದು ಕಾನೂನಿಗೆ ವಿರೋಧವಾಗಿದ್ದು, ಕೂಡಲೇ ಪೊಲೀಸರು ಎಚ್ಚೆತ್ತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.