Wednesday, 28th July 2021

ಛತ್ತೀಸ್‌ ಗಢ: ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕ ನೀಡಿದ ದೂರಿನ ಮೇರೆಗೆ ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಭಾರತೀಯ ವೈದ್ಯಕೀಯ ಸಂಘ ಹಾಗೂ ಛತ್ತೀಸ್‌ ಗಢ ಹಾಸ್ಪಿಟಲ್‌ ಬೋರ್ಡ್‌ ನ ಚೇರ್‌ ಮ್ಯಾನ್‌ ಡಾ.ರಾಕೇಶ್‌ ಗುಪ್ತಾ, ರಾಮ್‌ ದೇವ್‌ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಐಪಿಸಿ ಸೆಕ್ಷನ್‌ 186, ಸೆಕ್ಷನ್‌ 188, 270 ಹಾಗೂ ಸೆಕ್ಷನ್‌ 504ರ ಅಡಿಯಲ್ಲಿ ರಾಮ್‌ ದೇವ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *