Friday, 24th September 2021

ಅಜಂತಾ ಟ್ರಿನಿಟಿ ಹೋಟೆಲ್ ನಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ

ಬೆಂಗಳೂರು : ನಗರದ ಬೆಂಗಳೂರಿನ ಟ್ರಿನಿಟಿ ಸರ್ಕಲ್‌ ಬಳಿಯಿರುವ 4 ಮಹಡಿಯ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಬೆಂಕಿ ಹೊತ್ತಿ ಉರಿದು, ಬೆಂಕಿ ಕೆನ್ನಾಲಗೆ 2 ಮಹಡಿಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.

ರಕ್ಷಣಾ ಸಿಬ್ಬಂದಿ ಹೋಟೆಲ್‌ನಲ್ಲಿ ಸಿಲುಕಿದ್ದ 7 ಜನರ ರಕ್ಷಣೆ ಮಾಡಿದ್ದಾರೆ. ಇಬ್ಬರಿಗೆ ಗಾಯವಾ ಗಿದ್ದು, ಸ್ಥಳೀಯ ಆಸೊತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 2 ಮಹಡಿಯಲ್ಲಿದ್ದ ವಸ್ತುಗಳು ಹಾಗೂ ಹೋಟೆಲ್‌ನ ಪಾರ್ಕಿಂಗ್‌ ಸ್ಥಳದಲ್ಲಿದ್ದ ಒಂದು ಆಟೋ, ಒಂದು ಬೊಲೆರೋ ವಾಹನ ಸುಟ್ಟು ಕರಕಲಾಗಿದೆ.

ಹೋಟೆಲ್‌ಗೆ ಹೊತ್ತಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಆಗಮಿಸಿದ್ದು, ಹಲಸೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *