Friday, 27th May 2022

ಪಂಜಾಬ್ ಲೋಕ ಕಾಂಗ್ರೆಸ್’ನ ಮೊದಲ ಪಟ್ಟಿ ಬಿಡುಗಡೆ

#Punjab LOk Congress

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾನುವಾರ ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ನ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ನಾಯಕ, ಎಲ್ಲಾ ಅಭ್ಯರ್ಥಿಗಳು ಪ್ರಬಲ ರಾಜಕೀಯ ಅರ್ಹತೆಗಳನ್ನು ಹೊಂದಿದ್ದಾರೆ, ಆಯಾ ಕ್ಷೇತ್ರಗಳಲ್ಲಿ ಚಿರಪರಿಚಿತ ಮುಖಗಳು ಎಂದು ಹೇಳಿದರು.

ತಮ್ಮ ತವರು ಕ್ಷೇತ್ರವಾದ ಪಟಿಯಾಲ ಅರ್ಬನ್‌ನಿಂದ ಸ್ಪರ್ಧಿಸುವ ನಿರ್ಧಾರವನ್ನು ಶನಿವಾರವೇ ಘೋಷಿಸಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಲ್ಲದೆ, ಸಮತೋಲಿತ ಮೊದಲ ಪಟ್ಟಿಯಲ್ಲಿ ಇತರ ಎಂಟು ಜಾಟ್ ಸಿಖ್‌ಗಳಿದ್ದಾರೆ. ನಾಲ್ವರು ಎಸ್‌ಸಿ ಸಮುದಾಯಕ್ಕೆ ಸೇರಿದವರು, ಮೂವರು ಒಬಿಸಿ ಸಮುದಾಯಕ್ಕೆ ಸೇರಿದವರು, ಐವರು ಹಿಂದೂಗಳು (ಮೂರು ಪಂಡಿತರು ಮತ್ತು ಇಬ್ಬರು ಅಗರ್‌ವಾಲ್‌ಗಳು)ಇದ್ದಾರೆ.