Wednesday, 5th October 2022

ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ ದಾಖಲು

ನವದೆಹಲಿ: ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ ದಾಖಲಾಗಿದೆ. ಪ್ರಯಾಣದ ಹಿನ್ನಲೆ ಹೊಂದಿರದ ವ್ಯಕ್ತಿಯಲ್ಲೂ ಈ ಸೋಂಕು ಕಂಡುಬಂದಿ ರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಈವರೆಗೂ ಕೇರಳದಲ್ಲಿ ಮಾತ್ರ ಕಂಡುಬಂದಿದ್ದ ಮಂಕಿಪಾಕ್ಸ್​ ಸೋಂಕು ಇದೀಗ ದೆಹಲಿಯಲ್ಲೂ ಕಾಣಿಸಿಕೊಂಡಿದ್ದು, ಸಾರ್ವ ಜನಿಕರು ಎಚ್ಚರಿಕೆ ಯಿಂದರಲು ಆರೋಗ್ಯ ಇಲಾಖೆ ಸೂಚಿಸಿದೆ.

ಕೇರಳದಲ್ಲಿ ಕಂಡುಬಂದಿರುವ ಮೂವರೂ ವ್ಯಕ್ತಿಗಳು ವಿದೇಶದಿಂದ ಬಂದ ವರೇ ಆಗಿದ್ದಾರೆ. ಹಾಗಾಗಿ, ವಿದೇಶದಿಂದ ಬಂದವರ ಮೇಲೆ ಮಾತ್ರ ನಿಗಾ ವಹಿಸಲಾಗಿತ್ತು.