Friday, 19th August 2022

ರಾಜ್ಯದಲ್ಲೇ ಮೊದಲ ಆರ್‌ಎಎಫ್‌ ಘಟಕ: ಜ.16ರಂದು ಶಂಕುಸ್ಥಾಪನೆ

ಶಿವಮೊಗ್ಗ: ಕರ್ನಾಟಕದ ಮೊದಲ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಘಟಕ ಸ್ಥಾಪನೆಗೆ ಜ.16ರಂದು ಶಂಕು ಸ್ಥಾಪನೆ ಮಾಡಲಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯ ಭದ್ರಾವತಿ ನಗರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಸ್ಥಾಪನೆಯಾಗಲಿದೆ. ಶಂಕು ಸ್ಥಾಪನೆ ಸಮಾರಂಭ ಜನವರಿ 17ರ ಬದಲಾಗಿ ಜನವರಿ 16ರಂದೇ ನಡೆಯಲಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಂಗಳವಾರ ಶಂಕುಸ್ಥಾಪನಾ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಜನವರಿ 16ರಂದು ಮಧ್ಯಾಹ್ನ 12.30ಕ್ಕೆ ಭೂಮಿ ಪೂಜೆ ನಡೆಯಲಿದ್ದು, 1 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ, ಆರ್‌ಎಎಫ್ ಪಡೆಗಳು ನಗರಕ್ಕೆ ಆಗಮಿಸಿದ್ದು, ಜ.16ರಂದು ಕಾರ್ಯಕ್ರಮವಾದ ನಂತರ ನಿರ್ಮಾಣ ಕಾರ್ಯ ಆರಂಭ ವಾಗಲಿದೆ.