Tuesday, 27th July 2021

ಹಾಂಕಾಂಗ್‌ನಲ್ಲಿ ಐವರು ಸಂಪಾದಕರ ಬಂಧನ

ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಗುರುವಾರ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು, ವಿದೇಶಿ ಶಕ್ತಿಗಳ ಜೊತೆಗೆ ಕೈಜೋಡಿಸಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.

ಇದೇ ಮೊದಲಿಗೆ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಈ ಕಾಯ್ದೆ ಬಳಕೆಯಾಗಿದೆ. ಚೀನಾ ತನ್ನ ಬಲ ಸ್ಥಾಪಿಸುವ ನಿಟ್ಟಿನಲ್ಲಿ ಇದು ಇನ್ನೊಂದು ಹೆಜ್ಜೆಯಾಗಿದೆಯೆನ್ನಲಾಗಿದೆ.

30ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವ ದಾಖಲೆ ಇದ್ದು, ಚೀನಾ ಮತ್ತು ಹಾಂಗ್‌ಕಾಂಗ್ ವಿರುದ್ಧ ವಿದೇಶಗಳು ನಿರ್ಬಂಧ ಹೇರುವಂತೆ ಪ್ರೇರೇಪಿಸುವಲ್ಲಿನ ಸಂಚು ಇದಾಗಿದೆ ಎಂದು ಪೊಲೀಸರು ತಿಳಿದ್ದಾರೆ.

 

Leave a Reply

Your email address will not be published. Required fields are marked *