Tuesday, 27th July 2021

ಧರ್ಮಸ್ಥಳ ವತಿಯಿಂದ ಆಹಾರ ಕಿಟ್ ವಿತರಿಸುವ ಕಾರ್ಯ ಶ್ಲಾಘನೀಯವಾಗಿದೆ : ಪರಸಪ್ಪ ಬಬಲಿ 

ಮೂಡಲಗಿ : ಅಂದು ದುಡಿದು ಅಂದೇ ಉಣ್ಣುವ ಅನಿವಾರ್ಯತೆಯಲ್ಲಿರುವ ಇಂತಹ ಕುಟುಂಬಗಳು ಹಸಿವಿನಿಂದ ಬಾಧಿತ ಗೊಂಡಿದ್ದವು. ಇಂತಹ ಕುಟುಂಬಗಳನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆಯುತ್ತಿದೆ ಎಂದು ಪಟ್ಟಣ ಪಂಚಾಯಿತ ಅಧ್ಯಕ್ಷ ಪರಸಪ್ಪ ಬಬಲಿ ಹೇಳಿದರು.
ಮಂಗಳವಾರ ತಾಲೂಕಿನ ನಾಗನೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಡ ಕುಟುಂಬ ಗಳಿಗೆ ಆಹಾರ ಧ್ಯಾನಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ,ಕೊರೋನಾ ಸಂಕಷ್ಟದ ಪರಿಸ್ಥಿತಿಯನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಇಂತಹ ಕುಟುಂಬಗಳ ಮನೆ ಭೇಟಿ ಮಾಡಿ ಅವರ ಅಗತ್ಯತೆ ತಿಳಿದುಕೊಂಡು ದವಸ ಧಾನ್ಯಗಳ ಕಿಟ್ಟನ್ನು ವಿತರಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮೂಡಲಗಿ ತಾಲೂಕಿನ ಯೋಜನಾಧಿಕಾರಿ ದೇವರಾಜ ಮಾತನಾಡಿ, ಕೊರೋನಾ ವಿಪತ್ತಿನ ಸಮಯ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನ ಹಸ್ತ ನೀಡುತ್ತಿದೆ ಎಂದು  ಹೇಳಿದರು.
ಯಾವುದೇ ಕಾರಣಕ್ಕೂ ಜನರು ಭಯಭೀತರಾಗಿ  ಸರ್ಕಾರದ ನಿಯಮಗಳನ್ನು ಪಾಲಿಸಿ, ತಮ್ಮ ಜೀವದ ಜೊತೆ ತಮ್ಮ ಕುಟುಂಬ ವನ್ನು ರಕ್ಷಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚರಕರಾದ ಪರ್ವೀನ ಮುಜಾವರ, ಬಾಹುಬಲಿ ಬಾಗೇವಾಡಿ, ಮುಖಂಡರಾದ ಗಜಾನನ ಯರಗಾನವಿ, ವೆಂಕಣ್ಣಾ ಹಾಗೂ ಸೇವಾ ಪ್ರತಿನಿಧಿಗಳಾದ ಮದೀನಾ ನಾಯಕವಾಡಿ, ಕವಿತಾ ದಿನ್ನೆಮನಿ ಹಾಗೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *