Wednesday, 9th October 2024

ಇರಾನ್‌ನಲ್ಲಿ 1,10767 ಹೆಚ್ಚು ಜನರಿಗೆ ಕರೋನಾ ಸೋಂಕು

ಟೆಹರಾನ್:

ಸೋಮವಾರ ರಾತ್ರಿ 48 ಮಂದಿ ಸಾವನ್ನಪ್ಪುವುದರೊಂದಿಗೆ ಇರಾನ್‌ನಲ್ಲಿ ಈವರೆಗೆ 6733 ಜನರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮೇ.12 ರಂದು ತಿಳಿಸಿದೆ.

1481 ಹೊಸ ಕರೋನಾ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ಒಟ್ಟು 110767 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯದ  ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.