Monday, 14th October 2024

ಬ್ರಿಟನ್ ಪ್ರಧಾನಿ ಮಗನಿಗೆ ವೈದ್ಯನ ಹೆಸರು

ಲಂಡನ್:

ಕರೋನಾ ಸೋಂಕಿಗೆ ಇತ್ತೀಚೆಗೆ ಗುಣಹೊಂದಿರುವ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತಮ್ಮ ವೈದ್ಯಕೀಯ ಚಿಕಿತ್ಸೆಯ ಅನುಭವಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಕರೋನಾ ಸೋಂಕು ತಗುಲಿದ್ದವರಿಗೆ ವೈದ್ಯರು ಅದ್ಭುತ ಸೇವೆಗಳನ್ನು ಕಲ್ಪಿಸುತ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ತಮ್ಮನ್ನು ಇರಿಸಿ, ಆಗಾಗ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಅವರ ಸೇವೆಯಿಂದಾಗಿ ನಾನು ಸೋಕಿನಿಂದ ಚೇತರಿಸಿಕೊಂಡೆ ಎಂದು ಜಾನ್ಸನ್ ತಿಳಿದ್ದಾರೆ.

ಮಾ.26 ರಂದು ಬ್ರಿಟನ್ ಪ್ರಧಾನಿ ಕರೋನಾ ಸೋಂಕಿಗೆ ಒಳಗಾಗಿ, ಸುಮಾರು 20 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು, ವೈರಸ್‌ನಿಂದ ಪೂರ್ಣವಾಗಿ ಚೇತರಿಸಿಕೊಂಡ ನಂತರ ಪ್ರಸ್ತುತ ದೈನಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉತ್ತಮ  ವೈದ್ಯಕೀಯ ಸೇವೆ ಸಲ್ಲಿಸಿದ ವೈದ್ಯರಿಗೆ ಜಾನ್ಸನ್ ತಮ್ಮದೇ ರೀತಿಯಲ್ಲಿ ಕೃತಜ್ಞತೆ ತಿಳಿಸಿದ್ದಾರೆ.

ತಾವು ಕರೋನಾ ಸೋಂಕಿನಿಂದ ಕ್ವಾರಂಟೈನ್ ಆಗಿದ್ದ ಸಂದರ್ಭದಲ್ಲಿ ಜನಿಸಿದ ತಮ್ಮ ಮಗನಿಗೆ, ತಮಗೆ ಚಿಕಿತ್ಸೆ ನೀಡಿದ ವೈದ್ಯರ ಹೆಸರನ್ನಿಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.