Friday, 13th December 2024

ಭಾರತೀಯರಿಗೆ ಜಪಾನ್ ಪ್ರವೇಶಕ್ಕೆ ನಿರ್ಬಂಧ

ಟೋಕಿಯೋ,

ಭಾರತ ಸೇರಿದಂತೆ 10 ದೇಶಗಳ ಪ್ರವಾಸಿಗರಿಗೆ ಜಪಾನ್ ಪ್ರವಾಸ ನಿರ್ಬಂಧ ವಿಧಿಸಿದೆ.

ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದ ಬಳಿಕ ಜಪಾನ್ ಮಹತ್ವದ ಆದೇಶ ಪ್ರಕಟಿಸಿದೆ.  ಕಳೆದ 14 ದಿನಗಳಲ್ಲಿ ಈ ದೇಶಗಳಲ್ಲಿ ಉಳಿದುಕೊಂಡಿದ್ದವರು ಸದ್ಯಕ್ಕೆ ಜಪಾನ್ ಪ್ರವೇಶ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ.

ಭಾರತ, ಅಫ್ಘಾನಿಸ್ತಾನ, ಅರ್ಜೆಂಟೀನಾ, ಬಾಂಗ್ಲಾದೇಶ, ಎಲ್ ಸಾಲ್ವಡರ್, ಘಾನಾ, ಕಜಕಿಸ್ತಾನ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ತಜಕಿಸ್ತಾನದ ನಾಗರಿಕರು ಸದ್ಯಕ್ಕೆ ಜಪಾನ್ ಪ್ರವೇಶಿಸುವಂತಿಲ್ಲ.
ವಿದೇಶಾಂಗ ಸಚಿವಾಲಯ ನೀಡಿರುವ ಮಾರ್ಗಸೂಚಿಯಂತೆ ಈ ಕ್ರಮ ಜರುಗಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಒಟ್ಟಾರೆ 112ಕ್ಕೂ ಅಧಿಕ ದೇಶಗಳ ಪ್ರವಾಸಿಗರು, ನಾಗರಿಕರಿಗೆ ಸದ್ಯಕ್ಕೆ ಪ್ರವೇಶ ನಿಷೇಧವಿದೆ. ಈ ಪಟ್ಟಿಯಲ್ಲಿ ಅಮೆರಿಕ ಚೀನಾ, ದಕ್ಷಿಣ ಕೊರಿಯಾ ಹಾಗೂ ಯುರೋಪಿನ ಕೆಲವು ರಾಷ್ಟ್ರಗಳು ಸೇರಿವೆ ಎನ್ನಲಾಗಿದೆ.