Wednesday, 11th December 2024

ಮಸೀದಿಯಲ್ಲಿ ಪ್ರಬಲ ಸ್ಫೋಟ: ಹತ್ತು ಮಂದಿ ಸಾವು

ಕಾಬೂಲ್‌: ಅಫ್ಘಾನಿಸ್ತಾನದ ಉತ್ತರ ನಗರ ಮಜರ್-ಇ-ಶರೀಫ್‌ನ ಶಿಯಾ ಮಸೀದಿಯಲ್ಲಿ ಗುರುವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 10 ಭಕ್ತರು ಮೃತಪಟ್ಟಿದ್ದಾರೆ.

ಮೃತರು ಮತ್ತು ಗಾಯಗೊಂಡವರನ್ನ ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಕರೆ ತರಲಾಗಿದೆ. ಉತ್ತರ ಮಜರ್-ಎ-ಶರೀಫ್‌ನ ಸಾಯಿ ಡೋಕೆನ್ ಮಸೀದಿಯಲ್ಲಿ ಮುಸ್ಲಿಮರು ಪವಿತ್ರ ರಂಜಾನ್ ಮಾಸವನ್ನ ಆಚರಿಸುತ್ತಿದ್ದು, ಭಕ್ತರು ಪ್ರಾರ್ಥನೆಗೆ ಕುಳಿತಾಗ ಸ್ಫೋಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಪ್ರಾಥಮಿಕ ವರದಿಗಳು ಕನಿಷ್ಠ 25 ಸಾವುನೋವುಗಳು ಸಂಭವಿಸಿವೆ ಎಂದು ದೃಢಪಡಿಸಿವೆ.