Friday, 13th December 2024

ಇಂಗ್ಲೆಂಡ್‌ನಲ್ಲಿ ಒಂದೇ ದಿನ 10 ಸಾವಿರ ಓಮೈಕ್ರಾನ್‌ ಸೋಂಕು ಪ್ರಕರಣ ಪತ್ತೆ

ಲಂಡನ್‌: ಇಂಗ್ಲೆಂಡ್‌ನಲ್ಲಿ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಓಮೈಕ್ರಾನ್‌ ಸೋಂಕು ಪ್ರಕರಣ ಗಳು ವರದಿಯಾಗಿವೆ.

ಅಲ್ಲದೆ, ಒಟ್ಟಾರೆಯಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ 90 ಸಾವಿರಕ್ಕೆ ಏರಿದೆ. ಓಮೈಕ್ರಾನ್‌ನ 10,059 ಪ್ರಕರಣಗಳು ದೃಢಪಟ್ಟಿವೆ. ಶುಕ್ರವಾರ ವರದಿಯಾಗಿದ್ದ (3,201) ಪ್ರಕರಣಗಳಿಗಿಂತ ಮೂರು ಪಟ್ಟು ಹೆಚ್ಚು. ಈ ಮೂಲಕ ಹೊಸ ತಳಿಯ ಪ್ರಕರಣಗಳ ಸಂಖ್ಯೆ 24,968ಕ್ಕೆ ಏರಿದೆ ಎಂದು ತಿಳಿಸಿದೆ.

ಕೋವಿಡ್‌ನಿಂದ ಶುಕ್ರವಾರ 111 ಮಂದಿ ಮೃತಪಟ್ಟಿದ್ದಾರೆ. ಓಮೈಕ್ರಾನ್‌ ಸೋಂಕಿನಿಂದ ಮೃತರ ಸಂಖ್ಯೆ 7ಕ್ಕೆ ಏರಿದೆ. ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆ ಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಹೇರಲು ಚಿಂತನೆ ನಡೆದಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್‌ ಜಾವಿದ್ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಬಹುತೇಕ 30 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ, ಸೋಂಕು ಪ್ರಮಾಣ ಏರಿಕೆಯ ಹಾದಿಯಲ್ಲಿದೆ’ ಎಂದು ಹೇಳಿ ದರು. ಸೋಂಕು ಏರಿಕೆ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಿರ್ಬಂಧ ಬಿಗಿಗೊಳಿಸಿದ್ದರೆ, ವೇಲ್ಸ್‌ನಲ್ಲಿ ಕ್ರಿಸ್‌ಮಸ್‌ ಪೂರ್ವಭಾವಿಯಲ್ಲಿ ನೈಟ್‌ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ.