Friday, 13th December 2024

ವಾಯವ್ಯ ಆಫ್ಗಾನಿಸ್ತಾನ: ಬಾಂಬ್‌ ಸ್ಫೋಟದಲ್ಲಿ 11 ಪ್ರಯಾಣಿಕರ ಸಾವು

ಕಾಬೂಲ್: ರಸ್ತೆ ಬದಿಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿ, 11 ಪ್ರಯಾಣಿಕರು ಮೃತಪಟ್ಟಿದ್ದಾರೆ. ವಾಯವ್ಯ ಆಫ್ಗಾನಿಸ್ತಾನದಲ್ಲಿ ಘಟನೆ ಸಂಭವಿಸಿದೆ.

ಮಿನಿವ್ಯಾನ್‌ ಕಂದಕಕ್ಕೆ ಉರುಳಿದ್ದು, ಬಳಿಕ ಸ್ಫೋಟಗೊಂಡಿತು. ಶವಗಳನ್ನು ಹೊರತೆಗೆಯುವ ಪ್ರಕ್ರಿಯೆ ನಡೆದಿದೆ ಎಂದು ಬಾದ್ಗಿ ಪ್ರಾಂತ್ಯದ ಗವರ್ನರ್‌ ಹೇಳಿದರು.

ಬಾದ್ಗಿ ಪ್ರಾಂತ್ಯ ಸರ್ಕಾರವು, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ತಾಲಿಬಾನ್ ಸಂಘಟನೆ ಬಾಂಬ್ ಅನ್ನು ವ್ಯಾನ್‌ನಲ್ಲಿ ಇರಿಸಿತ್ತು ಎಂದು ಆರೋಪಿಸಿದೆ.