Friday, 13th December 2024

ತೈವಾನ್‍ನಲ್ಲಿ ಬೆಂಕಿ ಅವಘಢ: 14 ಮಂದಿ ಸಾವು, 51 ಮಂದಿಗೆ ಗಾಯ

ಥೈಪೆ: ತೈವಾನ್‍ನ ದಕ್ಷಿಣ ವಲಯದಲ್ಲಿ ನಡೆದಿರುವ ಬೆಂಕಿ ಅವಘಢದಿಂದ ಸುಮಾರು 14 ಮಂದಿ ಮೃತಪಟ್ಟು, 51ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ತಳಮಹಡಿಯಿಂದ ಆರಂಭವಾದ ಬೆಂಕಿ ಇಡೀ ಕಟ್ಟಡವನ್ನು ಆಕ್ರಮಿಸಿದೆ.

ಕೆಲವರು ಸ್ಥಳದಲ್ಲೇ ಸಜೀವ ದಹನವಾದರೆ ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 51 ಮಂದಿ ಗಾಯಗೊಂಡಿದ್ದು, ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆ ನಿಯಂತ್ರಣ ಮೀರಿ, ಕಟ್ಟಡದ ಬಹಳಷ್ಟು ಮಹಡಿಗಳನ್ನು ಅದು ಹಾನಿ ಮಾಡಿದೆ. ಆರಂಭಿಕ ತನಿಖೆಯಲ್ಲಿ ಬೆಂಕಿ ಹತ್ತಿಕೊಳ್ಳಲು ಕಾರಣಗಳು ತಿಳಿದುಬಂದಿಲ್ಲ.  40 ವರ್ಷ ಹಳೆಯದಾದ ಕಟ್ಟಡದ ತಳ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳಿವೆ, ಮೇಲಿನ ಮಹಡಿಯಲ್ಲಿ ಜನವಸತಿಯ ಅಪಾರ್ಟ್‍ಮೆಂಟ್‍ಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.