Friday, 13th December 2024

1,400ಕ್ಕೂ ಹೆಚ್ಚು ಸಸ್ತನಿಗಳ ಸಾವು: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

ಅಟ್ಲಾಂಟಿಕ್ : ಫಾರೋ ದ್ವೀಪಗಳಲ್ಲಿ ಡಾಲ್ಫಿನ್ ಬೇಟೆಯಾಡುವ ಸಂದರ್ಭ ಸುಮಾರು 1,400ಕ್ಕೂ ಹೆಚ್ಚು ಸಸ್ತನಿಗಳು ಮೃತಪಟ್ಟಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ದ್ವೀಪಸಮೂಹದಲ್ಲಿ ಒಂದೇ ದಿನದಲ್ಲಿ 1400 ಕ್ಕೂ ಹೆಚ್ಚು ಬಿಳಿ ಬದಿಯ ಡಾಲ್ಫಿನ್ ಗಳನ್ನು ಕೊಲ್ಲಲಾ ಯಿತು. 50,000 ಜನಸಂಖ್ಯೆ ಹೊಂದಿರುವ ಉತ್ತರ ಅಟ್ಲಾಂಟಿಕ್ ದ್ವೀಪಗಳು ಸಾಮಾನ್ಯವಾಗಿ ಪೈಲಟ್ ತಿಮಿಂಗಿಲಗಳನ್ನು ಬೇಟೆಯಾಡಲು ತೊಡಗುತ್ತವೆಯೇ ಹೊರತು ಡಾಲ್ಫಿನ್ ಗಳಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

ಸ್ಥಳೀಯ ಪತ್ರಕರ್ತ ಹೇಳುವಂತೆ, ನಾವು ಸಾಮಾನ್ಯವಾಗಿ ಅಂತಹ ದೊಡ್ಡ ಸಂಖ್ಯೆಯಲ್ಲಿ ದಾಲ್ಫಿನ್ ಕೊಲ್ಲುವು ದಿಲ್ಲ ಎಂದು ಹೇಳಿದ್ದಾರೆ. ಬೇಟೆಗಾರರು ತಿಮಿಂಗಿಲಗಳನ್ನು ಮೀನುಗಾರಿಕಾ ದೋಣಿಗಳ ಅಗಲವಾದ ಅರೆ-ವೃತ್ತದಿಂದ ಸುತ್ತುವರೆಯಲು ಪ್ರಯತ್ನಿಸುತ್ತಾರೆ, ಅಲ್ಲಿ ಅವುಗಳನ್ನು ಕಡಲತೀರ ಮತ್ತು ವಧೆ ಮಾಡುವ ಕೊಲ್ಲಿಗೆ ಓಡಿಸುತ್ತಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಡಾಲ್ಫಿನ್ ಗಳ ರಕ್ತಸಿಕ್ತ ಶವಗಳ ಫೋಟೋಗಳು ಆಕ್ರೋಶಕ್ಕೆ ಕಾರಣವಾಯಿತು. ತಿಮಿಂಗಿಲಗಳು ಮತ್ತು ಡಾಲ್ಫಿನ್ ಗಳ ಬೇಟೆಯ ವಿರುದ್ಧ ಪ್ರಚಾರ ಮಾಡುತ್ತಿರುವ ಚಾರಿಟಿ ಸೀ ಶೆಫರ್ಡ್ ಈ ಅಭ್ಯಾಸವನ್ನು ಅನಾಗರಿಕ ಎಂದು ಬಣ್ಣಿಸಿದೆ.