Sunday, 13th October 2024

ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಮಂದಿಗೆ ಗಾಯ

ಕಾಬೂಲ್: ವಾರ್ಡಕ್ ಪ್ರಾಂತ್ಯದ ಹೆದ್ದಾರಿಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದು 18 ಜನರು ಗಾಯಗೊಂಡಿದ್ದಾರೆ.

ನಂಗರ್‌ಹಾರ್ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಎಂಟು ಜನರು ಮೃತ ಪಟ್ಟು, ಇಬ್ಬರು ಗಾಯಗೊಂಡಿದ್ದರು.

ಪ್ರಾಂತೀಯ ರಾಜಧಾನಿ ಜಲಾಲಾಬಾದ್ ನಗರದ ಪೊಲೀಸ್ ಜಿಲ್ಲೆ 6 ರ ರಿಂಗ್ ರಸ್ತೆಯಲ್ಲಿ ಎರಡು ವಾಹನಗಳು ಮುಖಾಮುಖಿ ಯಾಗಿ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಕ್ಸಿನ್ಹುವಾಗೆ ತಿಳಿಸಿದ್ದಾರೆ.

ಪರ್ವತಮಯ ದೇಶದಲ್ಲಿ ರಸ್ತೆ ಅಪಘಾತಗಳು ಆಗಾಗ್ಗೆ ಸಂಭವಿಸಿ, ಕ್ಸಿನ್‌ಹುವಾ ಪ್ರಕಾರ ಕಳಪೆ ಚಾಲನೆ ಅಥವಾ ಕಳಪೆ ನಿರ್ವಹಣೆಯ ರಸ್ತೆಗಳು ಮತ್ತು ವಾಹನಗಳಿಂದ ಹೆಚ್ಚಾಗಿ ಸಂಭವಿಸುತ್ತವೆ.