ಮೇ 26 ರಿಂದೀಚೆಗೆ ಇದೇ ಮೊದಲು 87 ವರ್ಷದ ಬೀಜಿಂಗ್ ವ್ಯಕ್ತಿ ಸಾವಿಗೀಡಾಗಿರುವು ದಾಗಿ ವರದಿಯಾಗಿದ್ದು, ಈ ಮೂಲಕ ಒಟ್ಟು ಮೃತರ ಸಂಖ್ಯೆ 5,227 ಕ್ಕೆ ತಲುಪಿದೆ. ಈ ಹಿಂದೆ ಶಾಂಘೈನಲ್ಲಿ ಸಾವಿನ ಪ್ರಕರಣ ವರದಿಯಾಗಿತ್ತು. ಚೀನಾದಲ್ಲಿ ಈವರೆಗೆ ಶೇ 92ಕ್ಕಿಂತ ಅಧಿಕ ಜನರು ಲಸಿಕೆಯನ್ನು ಪಡೆದಿದ್ದರೂ, ವಯಸ್ಸಾದವರಲ್ಲಿ ವಿಶೇಷವಾಗಿ 80 ವರ್ಷಕ್ಕಿಂತ ಮೇಲ್ಪಟ್ಟವರೇ ಬಹುಪಾಲು ಇನ್ನೂ ಲಸಿಕೆ ಪಡೆದಿಲ್ಲ.
ಇದೇ ಕಾರಣಕ್ಕಾಗಿಯೇ ಚೀನಾ ಹೆಚ್ಚಾಗಿ ತನ್ನ ಗಡಿಗಳನ್ನು ಮುಚ್ಚಿದೆ ಎಂದು ಪರಿ ಗಣಿಸಲಾಗಿದೆ ಮತ್ತು ಲಾಕ್ಡೌನ್ಗಳು, ಕ್ವಾರಂಟೈನ್ಗಳು, ಪ್ರಕರಣ ಟ್ರೇಸಿಂಗ್ ಮತ್ತು ಸಾಮೂಹಿಕ ಪರೀಕ್ಷೆಗಳ ಮೂಲಕ ಸೋಂಕನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ.
ಶೂನ್ಯ ಕೋವಿಡ್ ನೀತಿಯಿಂದಾಗಿ ಇಂಟರ್ನೆಟ್ ಬಳಕೆದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಸಹಾಯ ಮಾಡಲು ವಿಫಲರಾದ ಝೆಂಗ್ಝೌ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.