ಕ್ವಿಟೊ: ಈಕ್ವೆಡಾರ್ನ ಗಯಾಕ್ವಿಲ್ನ ಜೈಲಿನಲ್ಲಿ ಗ್ರೆನೇಡ್ ಸ್ಫೋಟಗೊಂಡು 24 ಕೈದಿಗಳು ಮೃತಪಟ್ಟಿದ್ದಾರೆ. 48 ಮಂದಿ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾರಾಗೃಹಗಳ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರೆನೇಡ್ ಸ್ಫೋಟದಿಂದಲೇ ಕೈದಿಗಳು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಜನರಲ್ ಫೌಸ್ಟೊ ಬ್ಯೂನಾನೊ ತಿಳಿಸಿ ದ್ದಾರೆ. ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ, ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಮೃತರು ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿ ವಿವಿಧ ಪ್ರಕರಣಗಳ ಆರೋಪಿಗಳಾಗಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಗಯಾಕ್ವಿಲ್ನ ಕಾರಾಗೃಹವೊಂದರಲ್ಲಿ ಆರೋಪಿಗಳ ಬಳಿ ಇದ್ದ ಎರಡು ಬದೂಕುಗಳು, ಒಂದು ರಿವಾಲ್ವರ್, 500ಕ್ಕೂ ಹೆಚ್ಚು ಮದ್ದುಗುಂಡುಗಳು, ಗ್ರೆನೇಡ್ ಸೇರಿದಂತೆ ಮನೆಯಲ್ಲಿ ತಯಾರಿಸಿದ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.