Monday, 9th December 2024

ಫಿಲಿಪ್ಪೈನ್ಸ್: ರನ್‍ವೇನಲ್ಲಿ ವಿಮಾನ ಅಪಘಾತ, 17 ಜನರ ಸಾವು

ಮನೀಲಾ: ಸೇನಾಪಡೆ ಯೋಧರನ್ನು ಕರೆ ತರುತ್ತಿದ್ದ ಫಿಲಿಪ್ಪೈನ್ಸ್ ವಾಯುಪಡೆಯ ವಿಮಾನ ರನ್‍ವೇನಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಗಿದೆ. ಕನಿಷ್ಠ 85 ಜನರನ್ನು ಹೊತ್ತೊಯ್ಯುತ್ತಿತ್ತು.

ವಾಯುಪಡೆಯ ಸಿ -130 ವಿಮಾನದ ಅವಶೇಷಗಳಿಂದ ಇಲ್ಲಿಯವರೆಗೆ 45 ಜನರನ್ನು ರಕ್ಷಿಸಲಾಗಿದೆ, 17 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಂಡೋನೇಷ್ಯಾದ ದಕ್ಷಿಣ ವಲಯದ ಕ್ಯಾಂಗ್ಯೋನ್‍ನಿಂದ ಸುಲು ಪ್ರಾಂತ್ಯದ ಜುಲೋ ದ್ವೀಪಕ್ಕೆ ಪಡೆ ಗಳನ್ನು ಈ ವಿಮಾನ ಕರೆತರುತ್ತಿತ್ತು. ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ನಿಯಂತ್ರಣ ತಪ್ಪಿದ ವಿಮಾನ ನಿಲ್ಲುವಲ್ಲಿ ವಿಫಲವಾಗಿ ಮತ್ತೆ ಮೇಲೇರುವ ಭರದಲ್ಲಿ ಹತ್ತಿರದ ಗ್ರಾಮದ ಬಳಿ ಪತನವಾಗಿದೆ ಎಂದು  ಮೂಲಗಳು ತಿಳಿಸಿವೆ.

ಇಂಡೋನೇಷ್ಯಾದ ಸೇನಾಪಡೆ ಮುಖ್ಯಸ್ಥ ಜನರಲ್ ಸೋಹಿಜಾನಾ, ವಿಮಾನದಲ್ಲಿ ಎಷ್ಟು ಜನರಿದ್ದ ರೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ. ಈ ಪ್ರದೇಶದಲ್ಲಿ ಬಂಡುಕೋರರನ್ನು ಮಟ್ಟಹಾಕಲು ಈ ಪಡೆಯನ್ನು ಇಲ್ಲಿಗೆ ಕರೆತರಲಾಗುತ್ತಿತ್ತು. ಆದರೆ, ದುರಂತದಿಂದ ಸೇನೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.

ಭಯೋತ್ಪಾದನೆ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ದ್ವೀಪವೊಂದಕ್ಕೆ ನಿಯೋಜಿಸಲಾಗಿತ್ತು.