Saturday, 14th December 2024

ಟ್ರಾವೆಲರ್ ಬಸ್ ಪಲ್ಟಿ: ನಾಲ್ವರ ಸಾವು, 48 ಮಂದಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ಝಬುಲ್ ಪ್ರಾಂತ್ಯದಲ್ಲಿ ಟ್ರಾವೆಲರ್ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟು 48 ಮಂದಿ ಗಾಯಗೊಂಡಿದ್ದಾರೆ.

ಶಹರ್-ಎ-ಸಫಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು  ಮೃತಪಟ್ಟಿದ್ದಾರೆ. 48 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಂತೀಯ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಹಕಿಮಿ ತಿಳಿಸಿದ್ದಾರೆ.

ಅಜಾಗರೂಕ ಚಾಲನೆ ಮತ್ತು ದಟ್ಟಣೆಯ ರಸ್ತೆಗಳಿಂದಾಗಿ ಅಫ್ಘಾನಿಸ್ತಾನದಲ್ಲಿ ಆಗಾಗ್ಗೆ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.