Monday, 4th November 2024

ಕಲ್ಲಿನ ಗೋಡೆ ಜರಿದು 7 ಮಂದಿ ಪ್ರವಾಸಿಗರ ಸಾವು

ಬ್ರೆಸಿಲಿಯಾ : ಜಲಪಾತವೊಂದರ ಬಳಿ ಭಾರೀ ಗಾತ್ರದ ಕಲ್ಲಿನ ಗೋಡೆ ಜರಿದು ದೋಣಿಗಳಲ್ಲಿ ಬಂದಿದ್ದ ಪ್ರವಾಸಿಗರಲ್ಲಿ 7 ಮಂದಿ ಮೃತಪಟ್ಟಿದ್ದಾರೆ. 9 ಮಂದಿಗೆ ತೀವ್ರವಾದ ಗಾಯಗಳಾಗಿವೆ.

ಬ್ರೆಜಿಲ್‌ನ ಮಿನಾಸ್ ಗೈಸ್ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೋ ಕಣಿವೆಯಲ್ಲಿ ಘಟನೆ ನಡೆದಿದೆ.

ಜಲಪಾತದ ಸರೋವರದ ಕಡೆ ಹಲವು ದೋಣಿಗಳಲ್ಲಿ ಪ್ರವಾಸಿಗರು ಹೋಗಿದ್ದರು. ಈ ಸಂದರ್ಭ ದಲ್ಲಿ ಜಲಪಾತದ ಕಲ್ಲಿನ ಒಂದು ಭಾಗ ಮುರಿದು ಎರಡು ದೋಣಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮ ಎರಡು ದೋಣಿಗಳಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ. ನೀರಿನಲ್ಲಿ ಕಾಣೆಯಾಗಿರುವ ಮೂವರ ಹುಡುಕಾಟ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

23 ಮಂದಿ ಇತರ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಕಳೆದ ಎರಡು ವಾರಗಳಿಂದ ಭಾರೀ ಮಳೆಯಾಗಿದ್ದು, ಬಂಡೆ ಕಲ್ಲು ಜರಿಯಲು ಮೂಲ ಕಾರಣ ಇದೇ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.