ಕಾಬೂಲ್: ಅಪರಿಚಿತ ವ್ಯಕ್ತಿಗಳು ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯಗಳಾದ ಕುಂದುಜ್ ಮತ್ತು ತಖರ್ ಪ್ರದೇಶದಲ್ಲಿ ನಡೆಸಿದ ಪ್ರತ್ಯೇಕ ಗುಂಡಿನ ದಾಳಿ ಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ ಎಂಟು ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ.
ಗುರುವಾರ ಉತ್ತರ ಅಫ್ಘಾನಿಸ್ತಾನದ ನಾಲ್ಕು ಸ್ಥಳಗಳಲ್ಲಿ 8 ಆರೋಗ್ಯ ಸಿಬ್ಬಂದಿಗಳು ಪೋಲಿಯೊ ಲಸಿಕೆ ಹಾಕುತ್ತಿದ್ದರು. ಈ ವೇಳೆ ನಡೆದ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಮಧ್ಯಾಹ್ನ ಕುಂದುಜ್‌ನ ಹಲವಾರು ಭಾಗಗಳಲ್ಲಿ, ಪೋಲಿಯೊ ಅಭಿಯಾನದಲ್ಲಿ 8 ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಕುಂದುಜ್ ಭದ್ರತಾ ವಿಭಾಗದ ವಕ್ತಾರ ಹೇಳಿದ್ದಾರೆ. ಕುಂದುಜ್‌ನ ಭದ್ರತಾ ವಿಭಾಗದ ಪ್ರಕಾರ, ಇಬ್ಬರು ದಾಳಿಕೋರರನ್ನು ಬಂಧಿಸಲಾಗಿದೆ. ಕಾರ್ಯಕರ್ತರ ಹತ್ಯೆಯನ್ನು ವಿಶ್ವಸಂಸ್ಥೆ ಖಂಡಿಸಿದೆ.