Friday, 13th December 2024

ವಿಷ ಸೇವಿಸಿ 80 ಬಾಲಕಿಯರು ಅಸ್ವಸ್ಥ

ಕಾಬೂಲ್: ಶಾಲೆಗಳಲ್ಲಿ ವಿಷ ಸೇವಿಸಿದ ಸುಮಾರು 80 ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಫ್ಘಾನಿಸ್ತಾನದ ಶಿಕ್ಷಣ ಅಧಿಕಾರಿ ತಿಳಿಸಿದ್ದಾರೆ. ಉತ್ತರದ ಸರ್-ಎ-ಪುಲ್ ಪ್ರಾಂತ್ಯದಲ್ಲಿ ಘಟನೆಗಳು ಸಂಭವಿಸಿವೆ.

ಸಂಚರಕ್ ಜಿಲ್ಲೆಯಲ್ಲಿ 1 ರಿಂದ 6 ನೇ ತರಗತಿಯ ವಿದ್ಯಾರ್ಥಿನಿಯರಲ್ಲಿ ವಿಷಪ್ರಾಶನ ಸಂಭವಿಸಿದೆ. ನಸ್ವಾನ್-ಎ-ಕಬೋದ್ ಆಬ್ ಶಾಲೆಯಲ್ಲಿ 60 ಮತ್ತು ನಸ್ವಾನ್-ಎ-ಫೈಜಾಬಾದ್ ಶಾಲೆಯಲ್ಲಿ 17 ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎರಡೂ ಶಾಲೆಗಳು ಒಂದಕ್ಕೊಂದು ಹತ್ತಿರದಲ್ಲಿವೆ. ನಾವು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಮತ್ತು ಈಗ ಅವರೆಲ್ಲರೂ ಚೆನ್ನಾಗಿದ್ದಾರೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕೃತ್ಯವೆಸಗಲು ಮೂರನೇ ವ್ಯಕ್ತಿಗೆ ದ್ವೇಷದಿಂದ ಯಾರೋ ಹಣ ನೀಡಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಗಳು ತೋರಿಸುತ್ತವೆ ಎಂದು ರಹಮಾನಿ ಹೇಳಿದರು. ಆದ್ರೆ, ಹುಡುಗಿಯರು ಹೇಗೆ ವಿಷ ಸೇವಿಸಿದರು ಎಂಬುದರ ಬಗ್ಗೆ ರಹಮಾನಿ ಯಾವುದೇ ಮಾಹಿತಿ ಯನ್ನು ನೀಡಲಿಲ್ಲ.

ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮತ್ತು ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲೆ ತಮ್ಮ ಶಿಸ್ತುಕ್ರಮವನ್ನು ಪ್ರಾರಂಭಿಸಿದ ನಂತರ ಈ ರೀತಿಯ ಆಕ್ರಮಣವು ಮೊದಲ ಬಾರಿಗೆ ಸಂಭವಿಸಿದೆ.