Wednesday, 11th December 2024

ಪ್ರಯಾಣಿಕನ ದುರ್ವರ್ತನೆ: ಏರ್ ಫ್ರಾನ್ಸ್ ವಿಮಾನ ತುರ್ತು ಲ್ಯಾಂಡಿಂಗ್

ಬಲ್ಗೇರಿಯ: ಪ್ಯಾರಿಸ್‌ನಿಂದ ನವದೆಹಲಿಗೆ ಹೋಗುವ ಮಾರ್ಗದಲ್ಲಿ ಏರ್ ಫ್ರಾನ್ಸ್ ವಿಮಾನವು ಬಲ್ಗೇರಿಯಾದ ಸೋಫಿಯಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.

ಭಾರತೀಯ ಮೂಲದ ಪ್ರಯಾಣಿಕ ಟೇಕಾಫ್ ಆದ ಕೂಡಲೇ ಇತರ ಪ್ರಯಾಣಿಕರೊಂದಿಗೆ ಜಗಳವಾಡುವುದು, ಫ್ಲೈಟ್ ಅಟೆಂಡೆಂಟ್ ಮೇಲೆ ಹಲ್ಲೆ ಮತ್ತು ಕಾಕ್‌ಪಿಟ್‌ನ ಬಾಗಿಲನ್ನು ಹೊಡೆಯುವುದನ್ನು ಶುರು ಮಾಡಿದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿ ಇವಾಯಿಲೊ ಹೇಳಿದ್ದಾರೆ.

ಅವರ ಆಕ್ರಮಣಕಾರಿ ನಡವಳಿಕೆ ವಿಮಾನದ ಕಮಾಂಡರ್ ಸೋಫಿಯಾದಲ್ಲಿ ತುರ್ತು ಲ್ಯಾಂಡಿಂಗ್ ಪಡೆಯಲು ಕಾರಣ ವಾಯಿತು. ಅವರ ಹೆಸರನ್ನು ಬಹಿರಂಗಪಡಿಸದೆ ವಿಮಾನದಿಂದ ಕೆಳಗಿಳಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.