Wednesday, 11th December 2024

ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ

ರಷ್ಯಾ: ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಏರ್ ಇಂಡಿಯಾ ಎಐ173 ವಿಮಾನದಲ್ಲಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿ ಇದ್ದರು.

“ಜೂನ್ 6 ರ ಏರ್ ಇಂಡಿಯಾ ಫ್ಲೈಟ್ AI173, ದೆಹಲಿ – ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ವಿಮಾನದಲ್ಲಿ ಅದರ ಎಂಜಿನ್ ಒಂದರಲ್ಲಿ ತಾಂತ್ರಿಕ ದೋಷವನ್ನು ಪತ್ತೆ ಮಾಡಲಾಗಿದೆ. 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯನ್ನು ಹೊತ್ತಿದ್ದ ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು. ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ವಾಗಿ ಭೂಸ್ಪರ್ಶ ಮಾಡಲಾಗಿದೆ” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನವು ಕಡ್ಡಾಯ ತಪಾಸಣೆಗೆ ಒಳಗಾಗುತ್ತಿದೆ, ಪ್ರಯಾಣಿಕರಿಗೆ ಎಲ್ಲಾ ಬೆಂಬಲವನ್ನು ಒದಗಿಸಲಾಗುತ್ತಿದೆ. ಏರ್ ಇಂಡಿಯಾ ಪ್ರಯಾಣಿಕರಿಗೆ ಅತಿ ಶೀಘ್ರದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಲು ಪರ್ಯಾಯ ಆಯ್ಕೆಯನ್ನು ಒದಗಿಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಎಂಜಿನ್‌ನಲ್ಲಿ ದೋಷ ಕಂಡು ಬಂದ ವಿಮಾನವನ್ನು ಇಳಿಸಲು ಏರ್ ಇಂಡಿಯಾಗೆ ಅನುಮತಿ ನೀಡಲಾಗಿತ್ತು ಎಂದು ರಷ್ಯಾದ ವಾಯುಯಾನ ಪ್ರಾಧಿಕಾರ ರೊಸಾವಿಯಾಟ್ಸಿಯಾ ಹೇಳಿದೆ.