ವಿಶ್ವಸಂಸ್ಥೆ: ಭಾರತದ ಹಿರಿಯ ರಾಜತಾಂತ್ರಿಕ ಅಮನ್ದೀಪ್ ಸಿಂಗ್ ಗಿಲ್ ಅವರನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ, ತನ್ನ ಪ್ರತಿನಿಧಿಯಾಗಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರು ನೇಮಕ ಮಾಡಿದ್ದಾರೆ.
ಗಿಲ್ ಅವರನ್ನು ‘ಡಿಜಿಟಲ್ ತಂತ್ರಜ್ಞಾನ ಕುರಿತಂತೆ ಚಿಂತನಾಶೀಲ ನಾಯಕ’ ಎಂದು ವಿಶ್ವಸಂಸ್ಥೆ ಗುರುತಿಸಿದೆ. ಸುಸ್ಥಿರಾಭಿವೃದ್ಧಿ ಗುರಿ ಸಾಧನೆಗಾಗಿ ಡಿಜಿಟಲ್ ತಂತ್ರಜ್ಞಾನದ ಸೇರ್ಪಡೆಯುಕ್ತ ಬಳಕೆಯು ಹೇಗೆ ಸಹಕಾರಿ ಎಂಬ ಬಗ್ಗೆ ಅವರು ಆಳವಾದ ಜ್ಞಾನ ಹೊಂದಿದ್ದಾರೆ.