Monday, 14th October 2024

ವಿಶ್ವಸಂಸ್ಥೆ: ತಂತ್ರಜ್ಞಾನ ಕ್ಷೇತ್ರ ಪ್ರತಿನಿಧಿಯಾಗಿ ಗಿಲ್‌ ನೇಮಕ

ವಿಶ್ವಸಂಸ್ಥೆ: ಭಾರತದ ಹಿರಿಯ ರಾಜತಾಂತ್ರಿಕ ಅಮನ್‌ದೀಪ್‌ ಸಿಂಗ್ ಗಿಲ್‌ ಅವರನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ, ತನ್ನ ಪ್ರತಿನಿಧಿಯಾಗಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರು ನೇಮಕ ಮಾಡಿದ್ದಾರೆ.

ಗಿಲ್‌ ಅವರನ್ನು ‘ಡಿಜಿಟಲ್‌ ತಂತ್ರಜ್ಞಾನ ಕುರಿತಂತೆ ಚಿಂತನಾಶೀಲ ನಾಯಕ’ ಎಂದು ವಿಶ್ವಸಂಸ್ಥೆ ಗುರುತಿಸಿದೆ. ಸುಸ್ಥಿರಾಭಿವೃದ್ಧಿ ಗುರಿ ಸಾಧನೆಗಾಗಿ ಡಿಜಿಟಲ್ ತಂತ್ರಜ್ಞಾನದ ಸೇರ್ಪಡೆಯುಕ್ತ ಬಳಕೆಯು ಹೇಗೆ ಸಹಕಾರಿ ಎಂಬ ಬಗ್ಗೆ ಅವರು ಆಳವಾದ ಜ್ಞಾನ ಹೊಂದಿದ್ದಾರೆ.

ಇವರು 2016ರಿಂದ 2018ರವರೆಗೆ ನಿಶ್ಯಸ್ತ್ರೀಕರಣ ಕುರಿತ ಸಮ್ಮೇಳನಕ್ಕೆ ಭಾರತೀಯ ರಾಯಭಾರಿ ಮತ್ತು ಶಾಶ್ವತ ಪ್ರತಿನಿಧಿ ಹಾಗೂ ಅಂತರರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಸಿಇಒ ಆಗಿಯೂ ಕಾರ್ಯನಿರ್ವಹಿಸಿದ್ದರು.