Saturday, 14th December 2024

ಸುಲಿಗೆ ಪ್ರಕರಣ: ರಣತುಂಗಾ ಸಹೋದರನಿಗೆ ಎರಡು ವರ್ಷ ಜೈಲು

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಅವರ ತಮ್ಮ, ಸಚಿವರೂ ಆಗಿರುವ ಪ್ರಸನ್ನ ರಣತುಂಗಾ ಅವರಿಗೆ ಸುಲಿಗೆ ಪ್ರಕರಣದಲ್ಲಿ ಹೈಕೋರ್ಟ್ ಎರಡು ವರ್ಷ ಜೈಲು ವಿಧಿಸಿದೆ.

ಉದ್ಯಮಿಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಆರೋಪದಡಿ 55 ವರ್ಷದ ಪ್ರಸನ್ನ ವಿರುದ್ಧ 2015 ರಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧ ಸಾಬೀತಾಗಿರುವು ದರಿಂದ ಶಿಕ್ಷೆ ವಿಧಿಸಿದೆ. ₹ 53 ಲಕ್ಷ ದಂಡ ಮತ್ತು ಸಂತ್ರಸ್ತ ಉದ್ಯಮಿಗೆ ಪರಿಹಾರವಾಗಿ ₹ 2.14 ಲಕ್ಷ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ, ಪ್ರಸನ್ನ ಅವರ ಪತ್ನಿಯನ್ನು ದೋಷಮುಕ್ತಗೊಳಿಸಿದೆ.